ಕಾವೂರು ಎಸ್.ಪಿ.ವೈ.ಎಸ್. ಯೋಗ ಸಮಿತಿಯಿಂದ 108 ಸೂರ್ಯ ನಮಸ್ಕಾರ
ಕಾವೂರು ದೇವಾಲಯದ ಪ್ರಾಂಗಣದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ ಚಾಲನೆ ನೀಡಿದರು. ಮನಪಾ ಮಾಜಿ ಸದಸ್ಯೆ ಗಾಯತ್ರಿ ರಾವ್, ಸಮಿತಿಯ ಜಿಲ್ಲಾ ಸಂಯೋಜಕಿ ಕನಕಾ ಅಮೀನ್, ಕಾವೂರು ನಗರ ಸಂಚಾಲಕ ಶ್ರೀನಿವಾಸ, ಮನೋಹರ್ ಉಪಸ್ಥಿತರಿದ್ದರು.
ಬೆಳಗ್ಗೆ 4.45 ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ 3 ಹಂತಗಳಲ್ಲಿ 9 ಬಾರಿ 108 ಸೂರ್ಯ ನಮಸ್ಕಾರ ಬೆಳಗ್ಗೆ 7 ಗಂಟೆಗೆ ಸಮಾಪನಗೊಂಡಿತು. ರಥಸಪ್ತಮಿಯಂದು ಸೂರ್ಯ ನಮಸ್ಕಾರ ಮಾಡುವ ಮಹತ್ವವನ್ನು ಪೇರ್ಲಗುರಿ ಶ್ರೀ ಪ್ರಸನ್ನ ಗಣಪತಿ ಶಾಖೆಯ ಯೋಗಪಟು ಕೃಷ್ಣಪ್ರಸಾದ್ ಅವರು ತಿಳಿಸಿದರು.
ಸೂರ್ಯ ನಮಸ್ಕಾರವನ್ನು 3 ಹಂತಗಳಲ್ಲಿ ಕ್ರಮವಾಗಿ ಯೋಗಪಟುಗಳಾದ ವಿಮಲ, ಹೊನ್ನಪ್ಪ, ಶಿಲ್ಪ, ಆಹನ, ಚಿಂತನ್, ದಿಯಾ, ನವ್ಯ, ಶೌರ್ಯ, ಚೈತ್ರ, ಅಮೃತಾಸನವನ್ನು ಮಂಜುನಾಥ ನಡೆಸಿಕೊಟ್ಟರು. ಆರಂಭಿಕ ಸಿದ್ಧತೆಯನ್ನು ದೀಪಾಲಿ ನೆರವೇರಿಸಿದರು ಪ್ರಾತ್ಯಕ್ಷಿಕೆಯಲ್ಲಿ ಯೋಗಪಟುಗಳಾದ ನಾರಾಯಣ, ಸುಧಾ ಸಹಕರಿಸಿದರು.
ಕಾವೂರು ಮಹಾಲಿಂಗೇಶ್ವರ ಶಾಖೆಯ ಶಿಕ್ಷಕ ಜಗದೀಶ್, ಕಾವೂರು ನಗರದ 18 ಶಾಖೆಯ ಯೋಗಪಟುಗಳು ಸಾರ್ವಜನಿಕರು ಸೇರಿ 257 ಮಂದಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾವೂರು ಕೆರೆಯ ಸಮೀಪದ ನಾಗಬನದ ಬಳಿ ಸಂಜೆಯ ತನಕ ಅಖಂಡ ಸೂರ್ಯ ನಮಸ್ಕಾರ ಜರುಗಿತು.
ಪವಿತ್ರ ಸ್ವಾಗತಿಸಿ, ನಿರೂಪಣೆ ಮಾಡಿದರು. ಮನೋಹರ ವಂದಿಸಿದರು.