ಜ.18 ರಂದು ‘ಅಲೋಯ್ ಕ್ವಿಜ್-ವಿಜ್ 2026 ರಸಪ್ರಶ್ನೆ ಸ್ಪರ್ಧೆ
ಮಂಗಳೂರು: ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ‘ಅಲೋಯ್ ಕ್ವಿಜ್-ವಿಜ್ 2026 ರಸಪ್ರಶ್ನೆ ಸ್ಪರ್ಧೆಯನ್ನು ಜ.18 ರಂದು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಕರಂಗಲ್ಪಾಡಿಯ ಸಂತ ಅಲೋಶಿಯಸ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಸ್ಪರ್ಧೆ ಆರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಭಾಗವಹಿಸುವರು ಎಂದು ಸಂಘದ ಕಾರ್ಯದರ್ಶಿ ನೈಲ್ ರೋಡ್ರಿಗಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿ ತಂಡದಲ್ಲಿ ತಲಾ ಒಬ್ಬ ದೃಷ್ಟಿಹೀನ, ವಾಕ್ ದೋಷ, ಶ್ರವಣದೋಷ , ಸರಕಾರಿ ಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ ಎಂದರು.
ಒಟ್ಟು 10 ತಂಡಗಳು ಭಾಗವಹಿಸಲಿವೆ. ಪ್ರತಿ ರಸಪ್ರಶ್ನೆಯಲ್ಲಿ 5 ಸುತ್ತುಗಳು ಇರಲಿದೆ. ವಿಶೇಷ ಸಾಮರ್ಥ್ಯ ಹೊಂದಿರುವ ಮಕ್ಕಳು ಮತ್ತು ಇತರ ಮಕ್ಕಳನ್ನು ಒಟ್ಟುಗೂಡಿಸುವ ವಿಧಾನದಿಂದ ಈ ರಸಪ್ರಶ್ನೆ ನಡೆಯಲಿದೆ ಎಂದವರು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಜೊಸಿಟ್ಟ ಸಿಕ್ವೇರ, ಸಂಘದ ಸದಸ್ಯ ರೋಹಿತ್ ಉಪಸ್ಥಿತರಿದ್ದರು.