ಆದೇಶ ಉಲ್ಲಂಘಿಸಿ ಮಹಾಸಭೆ
Saturday, January 17, 2026
ಮಂಗಳೂರು: ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೈಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಮಹಾಸಭೆ ಕರೆದಿದ್ದಾರೆ ಎಂದು ದರ್ಗಾ ಸಮಿತಿಯ ಸದಸ್ಯ ಫಾರೂಕ್ ಯು.ಎಚ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ಮಹಾ ಸಭೆ ಕರೆದಿರುವ ಬಗ್ಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಸಮಿತಿಯು ಜ.18ರಂದು ಮಹಾಸಭೆಗೆ ಸಮಿತಿ ನಿರ್ಧರಿಸಿ ನೋಟೀಸು ಜಾರಿ ಮಾಡಿದೆ. ಆದರೆ ಕಾನೂನು ಪ್ರಕಾರ ಸಭೆಗೆ ಅವಕಾಶ ಇರುವುದಿಲ್ಲ ಎಂದರು.
ಸಮಿತಿ ಸದಸ್ಯರಾದ ರಿಯಾಝ್, ಮುಸ್ತಫಾ, ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.