ಎಂಡಿಎಂಎ ಮಾರಾಟ ಆರೋಪಿ ಬಂಧನ
Saturday, January 17, 2026
ಉಳ್ಳಾಲ: ಮುನ್ನೂರು ಗ್ರಾಮದ, ರಾಣಿಪುರ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನಂದಾವರ ಸಜಿಪ ಮುನ್ನೂರು ನಿವಾಸಿ ಇಮ್ಮಿಯಾಝ್ ಯಾನೆ ಮೊಹಮ್ಮದ್ ಇಮ್ಮಿಯಾಝ್ ಎಂದು ಗುರುತಿಸಲಾಗಿದೆ.
ಈತ ಎಂಡಿಎಮ್‌ಎ ಮಾದಕವಸ್ತುವನ್ನು ತಂದು ಕಾಲೇಜು ವಿಧ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಧಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಆತನಿಂದ 65,000 ರೂ. ಮೌಲ್ಯದ 13 ಗ್ರಾಂ. ಎಂಡಿಎಂಎ ಮತ್ತು ಎರಡು ಸಾವಿರ ರೂ. ನಗದು, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.