ಜ.24-24 ರಂದು ಡಿಪಿಟಿ ಕಾನ್-3 ಎಂಬ ರಾಷ್ಟ್ರೀಯ ಸಮ್ಮೇಳನ
ಮಂಗಳೂರು: ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ನ ಪಾಲಿಮರ್ ಟೆಕ್ನಾಲಜಿ (ಡಿಪಿಟಿ) ವಿಭಾಗ, ಪಾಲಿಮರ್ ಹಳೆ ವಿದ್ಯಾರ್ಥಿಗಳ ಅಭಿವೃದ್ಧಿ ಸಂಘ ಹಾಗೂ ಭಾರತೀಯ ರಬ್ಬರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜ.23 ಮತ್ತು 24ರಂದು ಡಿಪಿಟಿ ಕಾನ್-3 ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಪಾಲಿಕೆಟೆಕ್ನಿಕ್‌ನ ಪ್ರಾಂಶುಪಾಲ ಹರೀಶ್ ಶೆಟ್ಟಿ, ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.24ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನೆ ನಡೆಯಲಿದ್ದು, ಮೈಸೂರಿನ ಭಾರತೀಯ ರಬ್ಬರ್ ಸಂಸ್ಥೆಯ ಸಿಇಒ ಎಸ್. ವಾಸುದೇವ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಪಾಲಿಮರ್ ಸಾಯನ್ಸ್ ಅಥವಾ ಟೆಕ್ನಾಲಜಿ ಕೋರ್ಸ್ ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಮಾತ್ರವಿದ್ದು, ಇದು ಎಸೆಸೆಲ್ಸಿ ಬಳಿಕದ ಮೂರು ವರ್ಷಗಳ ಡಿಪ್ಲೊಮಾ ಕಾರ್ಯಕ್ರಮವಾಗಿದೆ. ಐದು ದಶಕಗಳಲ್ಲಿ 1,000ಕ್ಕೂ ಅಧಿಕ ಮಂದಿ ಪಾಲಿಮರ್ ತಂತ್ರಜ್ಞರಾಗಿ ಹಲವರು ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ಉದ್ಯೋಗಸ್ಥರಾಗಿದ್ದರೆ. ಕೆಲವರು ದೇಶ ಮತ್ತು ವಿದೇಶದ ಹಲವು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಪಾಲಿಮರ್ ಹಳೆ ವಿದ್ಯಾರ್ಥಿ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷ ರಾಜೇಶ್ ರಾವ್, ವಿಭಾಗದ ಎಚ್ ಒಡಿ ಸಂತೋಷ್ ಫೆರ್ನಾಂಡಿಸ್, ಉಪನ್ಯಾಸಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.