ದಯಾನಂದ ಕತ್ತಲ್‌ಸಾರ್‌ಗೆ ‘ಕೆನರಾ ರತ್ನ’ ಪ್ರಶಸ್ತಿ ಪ್ರದಾನ

ದಯಾನಂದ ಕತ್ತಲ್‌ಸಾರ್‌ಗೆ ‘ಕೆನರಾ ರತ್ನ’ ಪ್ರಶಸ್ತಿ ಪ್ರದಾನ


ಬಂಟ್ವಾಳ: ಬೆಂಗಳೂರು ಕೆನರಾ ಅಸೋಸಿಯೇಷನ್(ರಿ)ನ 16ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಅನಂತನಗರ ಅಮೃತಾಯ ಸಭಾಂಗಣದಲ್ಲಿ  ನಡೆದಿದ್ದು, ಈ ಸಂದರ್ಭ ತುಳು ಭಾಷೆ, ಸಂಸ್ಕೃತಿಗೆ ನೀಡಿದ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರಿಗೆ ‘ಕೆನರಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಕುಮಾರ್ ವಹಿಸಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದಯಾನಂದ ಕತ್ತಲ್‌ಸಾರ್ ತುಳು ನಾಡು, ತುಳು ಸಂಸ್ಕೃತಿ, ಪ್ರಾಚೀನ ತುಳು ಲಿಪಿ, ತುಳುವರ ಆಹಾರ ಪದ್ದತಿಗಳ ಮಹತ್ವದ ಬಗ್ಗೆ ವಿವರಿಸಿದರಲ್ಲದೆ ತುಳುನಾಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಮಹಿಳೆಯರ ಪಾತ್ರವು ಮಹತ್ತರವಾಗಿದೆ ಎಂದರು.

ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ತುಳು ಭಾಷಣ ಸ್ಪರ್ಧೆ, ಕೃಷ್ಣ ರಾಧೆ ವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆರಾಧ್ಯ ದೇರಾಜೆ, ರಾಷ್ಟ್ರಮಟ್ಟದ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಬಹುಮುಖ ಪ್ರತಿಭೆ ಶನಯ ಶರತ್ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ತ್ವಿಷಾ ಪಿ.ಆರ್., ಮನ್ವಿತ್ ಆರ್. ಮತ್ತು ತನಿಷ್ ರೈ ಎನ್. ಅವರನ್ನು ಅಭಿನಂದಿಸಲಾಯಿತು.

ಅಸೋಸಿಯೇಷನ್‌ನ ಉಪಾಧ್ಯಕ್ಷ ವಿಜಯ್ ಕುಲಾಲ್ ಎಂ., ನವೀನ್ ಶೆಟ್ಟಿ, ಕೋಶಾಧಿಕಾರಿ ಯಶವಂತ್, ಸಂಘಟನಾ ಕಾರ್ಯದರ್ಶಿ ಯೋಗೇಶ್ ದೇರಾಜೆ, ಜತೆ ಕಾರ್ಯದರ್ಶಿ ಶ್ವೇತಾ ಆರ್. ಹೆಗ್ಡೆ, ಸದಸ್ಯರಾದ ವಸಂತ್ ಪೂಜಾರಿ, ವಿಠ್ಠಲ್ ಗೊಲ್ಲ, ಸಚಿನ್ ರೈ, ಸುಭಾಷ್, ವಿನಯ ಕಟ್ಟೆ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಸ್ಮಿತಾ ಸುನಿಲ್ ಶೆಟ್ಟಿ ವಂದಿಸಿದರು. ಶ್ವೇತಾ ಹೆಗ್ಡೆ ಮತ್ತು ರೂಪ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಸೋಸಿಯೇಷನ್‌ನ ಸದಸ್ಯರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article