ಕುಲ್ಕುಂದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ: ವಿಚಾರಗೋಷ್ಠಿ ಪರಿಕರಗಳ ಪ್ರಾತ್ಯಕ್ಷತೆ
ಉದ್ಘಾಟನೆಯನ್ನು ದೀಪ ಪ್ರಜ್ವಲನೆ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಅರುಣ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಡಿ.ಆರ್., ನಿರ್ದೇಶಕ ಭರತ್ ನೆಕ್ರಾಜ, ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಉಪಾಧ್ಯಕ್ಷ ರವೀಂದ್ರ ಕುಮಾರ ರುದ್ರಪಾದ, ಕಡಬ ಕೆಡಿಪಿ ಸದಸ್ಯ ಶಿವರಾಮ ರೈ, ಮಾಸ್ಟರ್ ಪ್ಲಾನ್ ಸದಸ್ಯ ಪವನ್, ಸುಬ್ರಹ್ಮಣ್ಯ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಕೃಷ್ಣಪ್ರಸಾದ್, ಸುಬ್ರಹ್ಮಣ್ಯ, ಯೆಣ್ಣೆಕಲ್ಲು, ಐನೆಕೀದು, ಬಳ್ಪ, ಕಾಯರ್ ತಡ್ಕ, ಬೀದಿಗುಡ್ಡೆ, ಷೇರು ಕೆಂಜಾಳ ಒಳ್ಳೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸುಳ್ಯ ಪಶು ಆಸ್ಪತ್ರೆಯ ಆಡಳಿತ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ಹಾಗೂ ಕಡಬ ಪಶು ಕಚೇರಿಯ ವಿಸ್ತರಣಾಧಿಕಾರಿ ನಿರಂಜನ್ ಬಿ.ಎಸ್. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿಷ ತಳಿ ಕರುಗಳ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸುಮಾರು 70 ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಮೂರು ವಿಭಾಗಗಳಾದ ಜೆರ್ಸಿ, ಎಚ್‌ಎಫ್, ಹಾಗೂ ದೇಶಿ ತಳಿಗಳಲ್ಲಿ 0 ಇಂದ-4, 5 ರಿಂದ 8 ಹಾಗೂ 9 ರಿಂದ 12 ತಿಂಗಳ ಗಳಂತೆ ಮೂರು ಕೆಟಗರಿ ಮೂರು ವಿಭಾಗಗಳಲ್ಲಿ ಬಹುಮಾನ ನೀಡಲಾಯಿತು. ನಿರ್ಣಾಯಕರುಗಳಾಗಿ ಡಾ. ಕೇಶವ ಸುಳ್ಳಿ, ಡಾ. ಮೇಘ ಶ್ರೀ ಪಾಲ್ಗೊಂಡಿದ್ದರು. ಅಲ್ಲದೆ ಭಾಗವಹಿಸಿದ ಎಲ್ಲಾ ಕರುಗಳಿಗೆ ಕೂಡ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.
ಸುಬ್ರಹ್ಮಣ್ಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಲ್ಲಿಕಾ ಸ್ವಾಗತಿಸಿ ವಂದಿಸಿದರು. ಡಾ. ವೆಂಕಟಚಲಪತಿ ಸಹಕರಿಸಿದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ಹಾಗೂ ಪ್ರಗತಿಪರ ಕೃಷಿಕ ಪಟೇಲ್ ಕಿಶೋರ್ ಕುಮಾರ್ ಕೂಜುಗೋಡು ಕಾರ್ಯಕ್ರಮ ನಿರೂಪಿಸಿದರು.
