ಜ.25 ಮತ್ತು ಫೆ.1 ರಂದು ‘ಹಿಂದೂ ಸಂಗಮ’ ಸಮಾವೇಶ
ಮಂಗಳೂರಿನ ವಿಶ್ವಹಿಂದು ಪರಿಷತ್ ಜಿಲ್ಲಾ ಕಚೇರಿ ವಿಶ್ವಶ್ರೀ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಪಂಚ ಪರಿವರ್ತನೆಗಳಾದ ಸಾಮರಸ್ಯ, ಕುಟುಂಬ ಪದ್ಧತಿ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಮತ್ತು ನಾಗರಿಕ ಕರ್ತವ್ಯ ಇವುಗಳು ಆಚರಣೆಯ ಮೂಲಕ ವ್ಯಕ್ತಿಯಿಂದ ಸಮಾಜದವರೆಗೆ ಪರಿವರ್ತನೆಯನ್ನು ಬೆಳೆಸುವ ವೇದಿಕೆಯನ್ನು ರೂಪಿಸುವ ಕಾರ್ಯಕ್ರಮ ಇದಾಗಿದೆ. ಈ ನಿಟ್ಟಿನಲ್ಲಿ ಗುರುಪುರದ ವಿವಿಧ ಮಂಡಲಗಳಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎಡಪದವು ಮಂಡಲ: ಕೊಂಪದವು, ಮುಚ್ಚೂರು, ಎಡಪದವು, ಬಡಗ ಎಡಪದವು ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ ಜ. 25 ರಂದು ಸ್ವಾಮಿ ವಿವೇಕಾನಂದ ವಿದ್ಯಾಲಯ ಪ್ರಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ನಿಮಿತ್ತ ಶೋಭಾ ಯಾತ್ರೆ ಶ್ರೀ ರಾಮ ಮಂದಿರ ಎಡಪದವು ಇಲ್ಲಿಂದ 2.30ಕ್ಕೆ ಪ್ರಾರಂಭವಾಗುವುದು.
ಮಳಲಿ ಮಂಡಲ: ಬಡಗುಳಿಪಾಡಿ, ತೆಂಕುಳಿಪಾಡಿ, ಮೊಗರು, ಕಿಲೆಂಜಾರು, ಕುಳವೂರು, ಮುತ್ತೂರು ಗ್ರಾಮಗಳನ್ನು ಒಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ ಫೆ.1 ರಂದು ನಾರ್ಲಪದವು, ಆಳ್ವಾಸ್ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದ ನಿಮಿತ್ತ ಶೋಭಾ ಯಾತ್ರೆ ಗಂಜಿಮಠದಿಂದ ಶ್ರೀಮಹಾಗಣಪತಿ ದೇವಸ್ಥಾನದ ವಠಾರದಿಂದ 2.30ಕ್ಕೆ ಪ್ರಾರಂಭವಾಗುವುದು.
ಗುರುಪುರ ಮಂಡಲ: ಮುಳೂರು, ಅಡ್ಡೂರು, ಕಂದಾವರ, ಕೊಳಂಬೆ, ಅದ್ಯಪಾಡಿ ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ ಫೆ.1 ರಂದು ಶ್ರೀ ವೈದ್ಯನಾಥ ಸಭಾಭವನದ ಬಳಿ ಕುಕ್ಕುದಕಟ್ಟೆ, ಗುರುಪುರ ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ನಿಮಿತ್ತ ಶೋಭಾ ಯಾತ್ರೆಯು ಗುರುಪುರ ಜಂಗಮ ಮಠದಿಂದ 2.30ಕ್ಕೆ ಪ್ರಾರಂಭವಾಗುವುದು.
ಪೆರ್ಮಂಕಿ ಮಂಡಲ: ನೀರು ಮಾರ್ಗ, ಬೊಂಡಂತಿಲ, ಉಳಾಯಿಬೆಟ್ಟು, ಮಲ್ಲೂರು ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ ಜ. 25 ರಂದು ಶ್ರೀ ಅರಸು ಮುಂಡತ್ತಾಯ ದೈವಸ್ಥಾನದ ಬಳಿ ನಡೆಯಲಿದೆ. ಕಾರ್ಯಕ್ರಮದ ನಿಮಿತ್ತ ಶೋಭಾ ಯಾತ್ರೆಯು ವಿಶ್ವೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ವಠಾರದಿಂದ 2.30ಕ್ಕೆ ಪ್ರಾರಂಭವಾಗುವುದು.
ಎಕ್ಕಾರು ಮಂಡಲ: ಬಡಗ ಎಕ್ಕಾರು, ತೆಂಕ ಎಕ್ಕಾರು, ಪೆರ್ಮುದೆ. ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ ಫೆ.1 ರಂದು ಬಂಟರ ಭವನ ಎಕ್ಕಾರ್ ಇಲ್ಲಿ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನ ವಠಾರದಿಂದ ಶೋಭಾ ಯಾತ್ರೆ ಹೊರಡಲಿದೆ.
ಕೆಂಜಾರು ಮಂಡಲ: ಕೆಂಜಾರು, ಮರವೂರು, 63ನೇ ತೋಕೂರು, ಜೋಕಟ್ಟೆ ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ ಫೆ. 1 ರಂದು ಪಾಪ್ಯೂಲರ್ ಫಾರ್ಮ್ ಮರವೂರು ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ನಿಮಿತ್ತ ಶೋಭಾ ಯಾತ್ರೆಯು ಶ್ರೀ ದೇವಿ ಭಜನಾ ಮಂದಿರ ಕೆಂಜಾರು, ಕರಂಬಾರು ಇಲ್ಲಿಂದ 2.30ಕ್ಕೆ ಪ್ರಾರಂಭವಾಗುವುದು.
ಬಜಪೆ ಮಂಡಲ: ಬಜಪೆ, ಮೂಡುಪೆರಾರ, ಪಡುಪೆರಾರ ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಕಾರ್ಯಕ್ರಮ ಫೆ. 1 ರಂದು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆಯಲಿದೆ. ಶೋಭಾ ಯಾತ್ರೆಯು ಬಜಪೆ ಶಕ್ತಿ ಮಂಟಪದಿಂದ 2.30ಕ್ಕೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ವಠಾರ ಪ್ರಾರಂಭವಾಗುವುದು ಎಂದರು.
ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರ್ಲ, ಸಂಯೋಜಕ ಕೃಷ್ಣ ಕೊಂಪದವು, ಕಾರ್ಯದರ್ಶಿ ಕೃಷ್ಣ ಕಜೆಪದವು, ಉಪಾಧ್ಯಕ್ಷ ರಾಜೀವ ಶೆಟ್ಟಿ ಪೆರ್ಮಂಕಿ, ಮಹಿಳಾ ಪ್ರಮುಖ್ ಗೀತಾ ಲಕ್ಷ್ಮಿ ಬಜಪೆ ಇದ್ದರು.