ಮಿಯ್ಯಾರಿನಲ್ಲಿ ಬೀಕರ ರಸ್ತೆ ಅಪಘಾತ ಮೂವರ ದಾರುಣ ಸಾವು, ಐದು ಮಂದಿ ಸ್ಥಿತಿ ಗಂಭೀರ
Friday, January 23, 2026
ಕಾರ್ಕಳ: ಖಾಸಗಿ ಬಸ್ಸು ಹಾಗೂ ಟ್ರಾಕ್ಸ್ ತೂಫಾನ್ ನಡುವೆ ಮುಖಮುಖಿ ಡಿಕ್ಕಿ ಆದ ಪರಿಣಾಮ ಮೂವರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಕಾರ್ಕಳ ತಾಲೂಕಿನ ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಮಿಯಾರು ಗ್ರಾಮದ ಕಂಬಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮದ್ಯಾಹ್ನ 3 ಗಂಟೆ ಸುಮಾರಿಗೆ ಕಾರ್ಕಳ ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುತಿದ್ದ ತೂಫಾನ್ ಬೆಳ್ತಂಗಡಿ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷತನದಿಂದ ಬರುತಿದ್ದ ಖಾಸಗಿ ಬಸ್ಸು ರಸ್ತೆಯ ಬಲ ಭಾಗಕ್ಕೆ ಬಂದು ತೂಪಾನ್ ಗೆ ಮುಖಮುಖಿ ಡಿಕ್ಕಿ ಯಾದ ಪರಿಣಾಮ ತೂಪನ್ನಲ್ಲಿದ್ದ ಮೂವರ ಸ್ಥಳದಲ್ಲೇ ಮರಣ ಹೊಂದಿದ್ದಾರೆ.
ತೂಫನ್ ವಾಹನದಲ್ಲಿದ್ದ ಒಟ್ಟು 12 ಜನ ಹಾಗೂ 1 ಮಗುವಿನ ಪೈಕಿ ಐದು ಮಂದಿ ಸ್ಥಿತಿ ಗಂಭೀರವಾಗಿದ್ದು ಮಗು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದು ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ಒಯ್ಯಲಾಗಿದೆ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಕಾರ್ಕಳದ ಆಸ್ಪತ್ರೆಗೆ ದಾಖಲಾಗಿರುತ್ತದೆ. ಸಣ್ಣ ಪುಟ್ಟ ಗಾಯಾಳುಗಳು ಕೂಡ ಕಾರ್ಕಳದ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಮೃತರು ಮೂಲತ ಗುಲ್ಬರ್ಗ ಜಿಲ್ಲೆಯವರಾಗಿದ್ದು ಚಾಲಕ ಮಣ್ಣಪ್ಪ, ಚೇತು, ರೋಹಿತ್ ಎಂದು ಗುರುತಿಸಲಾಗಿದೆ ವಿವಿಧ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆನ್ನಲಾಗಿದೆ.
ಕಾರ್ಕಳ ಪುಲ್ಕೆರಿ ಬೈಪಾಸ್ ನಿಂದ ಮಾಳ ಘಾಟ್ವರೆಗೆ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತಿದ್ದು ಅವೈಜ್ಞಾನಿಕವಾಗಿ ಕುಂಟುತ್ತಾ ನಡೆಯುತ್ತಿರುವ ಕಾಮಗಾರಿಯಿಂದಾಗಿ ಹಲವಾರು ಅಪಘಾತ ನಡೆಯುತ್ತಿದ್ದರೂ ಸಂಬಂಧ ಪಟ್ಟ ಇಲಾಖೆ ಎಚ್ಚೆತು ಕೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ನಗರ ಪೊಲೀಸರು ಬೇಟಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



