ಮೆಸ್ಕಾ೦: 77ನೇ ಗಣರಾಜ್ಯೋತ್ಸವ ದಿನಾಚರಣೆ
ಮೆಸ್ಕಾ೦ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪಿತ ಮಹಾತ್ಮ ಗಾ೦ಧೀಜಿ ಹಾಗೂ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾಚ೯ನೆಗೈದು ಮಾತನಾಡಿ, ಸಂವಿಧಾನವು ಪ್ರತಿಪಾದಿಸುವ ಮೌಲ್ಯಗಳನ್ನು ನಿರಂತರ ಕಾಪಾಡಿಕೊಂಡು ಗಣರಾಜ್ಯೋತ್ಸವದ ಅಶಯಗಳನ್ನು ಸಾಕಾರಗೊಳಿಸೋಣ ಎ೦ದರು. ಮೆಸ್ಕಾಂ ಗಣರಾಜ್ಯೋತ್ಸವವನ್ನು ಉತ್ತಮವಾಗಿ ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಿ ಕೊಂಡು ಬರುತ್ತಿದೆ ಎಂದವರು ಅಭಿನಂದಿಸಿದರು.
ಮೆಸ್ಕಾಂ ತಾಂತ್ರಿಕ ನಿರ್ದೆಶಕರಾದ ವಿ. ಹರೀಶ್ ಕುಮಾರ್ ಮಾತನಾಡಿ, ಮೆಸ್ಕಾಂ ದಕ್ಷ, ಗುಣಮಟ್ಟದ ಹಾಗೂ ಸಮರ್ಪಣಾ ಭಾವದ ಸೇವೆಯ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಇದಕ್ಕಾಗಿ ಸಂಸ್ಥೆಯ ಎಲ್ಲಾ ಆಡಳಿತ ಮತ್ತು ಸಿಬ್ಬಂದಿ ವರ್ಗವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಗಣರಾಜ್ಯೋತ್ಸವದ ಆಶಯ, ಮೌಲ್ಯಗಳನ್ನು ಸದಾ ಪಾಲಿಸುತ್ತಾ ದೇಶ ಮತ್ತು ಸಂಸ್ಥೆಯ ಉನ್ನತಿಗೆ ಕಟಿಬದ್ಧರಾಗೋಣ ಎಂದು ಕರೆ ನೀಡಿದರು.
ಮೆಸ್ಕಾಂ ಮುಖ್ಯ ಅಥಿ೯ಕ ಅಧಿಕಾರಿ ಮುರಳೀಧರ ನಾಯಕ್, ಮಂಗಳೂರು ವಲಯದ ಮುಖ್ಯ ಇಂಜಿನಿಯರ್ ರವಿಕಾಂತ ಕಾಮತ್, ಮೆಸ್ಕಾಂ ಜಾಗೃತ ದಳದ ಡಿವೈಎಸ್ಪಿ ಟಿ.ಆರ್. ಜೈಶಂಕರ್ ಉಪಸ್ಥಿತರಿದ್ದರು.
ಸಾವ೯ಜನಿಕ ಸ೦ಪಕ೯ ಅಧಿಕಾರಿ ವಸ೦ತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.