ಸಿರಿಧಾನ್ಯ ಬಳಕೆಯಿಂದ ಆರೋಗ್ಯಯುತ ಜೀವನ: ಜಯರಾಮ್
ಅವರು ಮಂಗಳವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿದರು.
ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ ಮಾತನಾಡಿದರು.
ಉಪ ಕೃಷಿ ನಿರ್ದೇಶಕ ಅಶೋಕ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ, ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಆಹಾರ ವಿಜ್ಞಾನಿ ಡಾ. ಫಝಲ್ ಎ.ಎ, ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಮಾರುತೇಶ್ ಎ.ಎಂ, ಡಾ. ನಿಟ್ಟೆ ವಿಶ್ವವಿದ್ಯಾಲಯದ ಆಹಾರ ಸುರಕ್ಷತೆ ಮತ್ತು ಪೊಷಕಾಂಶ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಮತ ಬಿ.ಎಸ್ ಅವರು ಪಾಲ್ಗೊಂಡಿದ್ದರು.
ರುಚಿಕರ ಖಾದ್ಯ- ಆಕರ್ಷಕ ತಿನಿಸುಗಳು...
ಈ ಪಾಕಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 51 ಜನರು ಭಾಗವಹಿಸಿದ್ದರು. ಮರೆತುಹೋದ ಖಾದ್ಯ ವಿಭಾಗದಲ್ಲಿ ಒಟ್ಟು 10 ಜನ, ಸಿರಿಧಾನ್ಯ ಖಾರ ವಿಭಾಗದಲ್ಲಿ ಒಟ್ಟು 17 ಜನ, ಸಿರಿಧಾನ್ಯ ಸಿಹಿ ವಿಭಾಗದಲ್ಲಿ ಒಟ್ಟು 24 ಜನ ಭಾಗವಹಿಸಿ ವಿವಿಧ ಖಾದ್ಯಗಳಾದ ಕಜೆ ಲಡ್ಡು, ಪತ್ರೊಡೆ, ತುಳುವಿನಲ್ಲಿ ಕರೆಯಲ್ಪುಡುವ ನಾಣಿಲ್, ಒಲ್ಲೆದ ಕೊಡಿ, ತೇರೆದ ಕೊಡಿ ವಿವಿಧ ಬಗೆಯ ಕಾಡುಸೊಪ್ಪಿನ ಚಟ್ನಿಗಳು, ರಾಗಿ ಲಡ್ಡು, ಜೋಳದ ರೊಟ್ಟಿ, ನವಣೆ ಉಪ್ಪಿಟ್ಟು, ನವಣೆ ಬಿಸಿಬೇಳೆಬಾತ್, ಜೋಳದ ಹಿಟ್ಟಿನಿಂದ ತಯಾರಿಸಿದ ಕೇಕ್, ಈರೋಳ್ ಜ್ಯೂಸ್, ಬೇಳೆ ಪಡ್ಡು, ನವಣೆ ಬರ್ಫಿ, ರಾಗಿ ಸಿಹಿ ಕಡುಬು, ಹನಿ ಮಿಲೆಟ್, ಸಿರಿಧಾನ್ಯ ಸುಕ್ಕಿನ ಉಂಡೆ, ನವಣೆ ಕ್ಯಾಪ್ಸಿಕಂ ಕಬಾಬ್, ಸಾಮೆ ತರಕಾರಿ ಬಿರಿಯಾನಿ, ಸಿರಿಧಾನ್ಯ ವಡೆ, ರಾಗಿ ಇಡ್ಲಿ, ಬರಗು ಉಪ್ಪಿಟ್ಟು, ನುಗ್ಗೆ ಸೊಪ್ಪಿನ ರೊಟ್ಟಿ, ಸಿರಿಧಾನ್ಯ ಕಿಚ್ಡಿ, ಹಾರಕ ಹಲಸಿನ ಗುಜ್ಜಿ ಬಿರಿಯಾನಿ, ಹಲಸಿನ ಹೋಳಿಗೆ, ಸಿರಿಧಾನ್ಯ ಕುಕೀಸ್, ನವಣೆ ಸಿಲ್ಕ್ ಫ್ಯೂಜನ್ ಡೆಸರ್ಟ್, ರಾಗಿ ಹಲ್ವ, ಸಿರಿಧಾನ್ಯ ಪೊಂಗಲ್ ವಿಶಿಷ್ಟವಾಗಿ ಒಂದಕ್ಕಿಂತ ಒಂದು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿದರು.