ವಂದನಾ ಅವರಿಗೆ ಪಿ.ಹೆಚ್‌ಡಿ. ಪದವಿ
Friday, January 30, 2026
ಮಂಗಳೂರು: ಮಿಲಾಗ್ರಿಸ್ ಪದವಿ ಕಾಲೇಜು ಮಂಗಳೂರು ಇಲ್ಲಿನ ಹಿಂದಿ ವಿಭಾಗದ ಉಪನ್ಯಾಸಕಿ ವಂದನಾ ಅವರು ಮಡಿಕೇರಿಯ ಫೀಲ್ಡ್ ಮಾರ್ಶಲ್ ಕೆ.ಎಂ. ಕಾರಿಯಪ್ಪ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ‘ಹಿಂದಿ ಏವಂ ಕನ್ನಡ ಭಕ್ತಿ ಸಾಹಿತ್ಯ ಮೇ ಸಂಗೀತ್ ದ್ವಾರಾ ರಸ ನಿಷ್ಪತ್ತಿ (ಸೂರದಾಸ್, ಮೀರಾಬಾಯಿ ಜೌರ್ ಪುರಂದರ ದಾಸ್, ಕನಕದಾಸ್ ಕೆ ಸಂದರ್ಭ ಮೇ) ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯವು ಪಿ.ಹೆಚ್‌ಡಿ ಪದವಿ ನೀಡಿ ಗೌರವಿಸಿದೆ.
ವಂದನಾ ಅವರು ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಇನ್ಫರ್ಮೇಶನ್ ಸಯನ್ಸ್ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ರಂಗನಾಥ್ ಕೆ. ಅವರ ಪತ್ನಿ. ಮತ್ತು ಗುಲ್ಬರ್ಗದ ನಿವೃತ್ತ ಉಪ ನಿರೀಕ್ಷಕ ಕಿಶನ್ ರಾವ್ ಕುಲಕರ್ಣಿ-ರೇಣುಕಾ ದಂಪತಿಯ ಪುತ್ರಿ.