ದಿನಗೂಲಿ ಕಾರ್ಮಿಕರಿಗೆ ಕಿರುಕುಳ: ಎಂಆರ್‌ಪಿಎಲ್ ಗೇಟ್ ಬಳಿ ಪ್ರತಿಭಟನೆ
ಇದರಿಂದ ಅಕ್ರೋಶಗೊಂಡ ಸುಮಾರು 400 ಕೂಲಿ ಕಾರ್ಮಿಕರು ದಿಢೀರನೇ ಎಂಆರ್‌ಪಿಎಲ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು. ಎಂಆರ್‌ಪಿಎಲ್ ಸಂಸ್ಥೆಯು ನೇರ ಉದ್ಯೋಗವನ್ನು ಸ್ಥಳೀಯರಿಗೆ ನೀಡುತ್ತಿಲ್ಲ, ಕಂಪೆನಿಯಿಂದ ಹೊರಸೂಸುವ ವಿಷಗಾಳಿ ವಿಷಯುಕ್ತವಾದ ನೀರಿ ಕುಡಿದು ಬದುಕುವವರಿಗೆ ನೇರ ಉದ್ಯೋಗ ಇಲ್ಲ. ಅದರೆ ಕನಿಷ್ಠ ಪಕ್ಷ ದಿನಗೂಲಿ ನೌಕರರಾಗಿ ಅನೇಕ ಜನ ಸ್ಥಳೀಯರು ಉದ್ಯೋಗದಲ್ಲಿದ್ದಾರೆ.
ಈಗ ಅವರನ್ನು ಎಂಆರ್‌ಪಿಎಲ್ ಸಂಸ್ಥೆ ಹೊರದಬ್ಬುವ ಕೆಲಸ ಮಾಡುತ್ತಿದೆ ಆ ಮೂಲಕ ಹೊರರಾಜ್ಯದವರನ್ನು ಕಡಿಮೆ ವೇತನಕ್ಕೆ ದುಡಿಸಿ ಸಂಸ್ಥೆಗೆ ಲಾಭ ತರುವಂತೆ ಮಾಡಿಸಿ ಸ್ಥಳೀಯರನ್ನು ಕಂಪೆನಿಯಿಂದ ಹೊರಹಾಕುವ ಮತ್ತು ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಹಾಗೂ ಪ್ರಸ್ತುತ ಉದ್ಯೋಗದಲ್ಲಿದ್ದ ಕೂಲಿ ಕಾರ್ಮಿಕರು ನಿವೃತ್ತಿ ಹೊಂದಿದರೆ ಅದಕ್ಕೆ ಹೊಸ ಕಾರ್ಮಿಕರನ್ನು ನೇಮಿಸದೆ ಇದ್ದ ಕಾರ್ಮಿಕರಿಂದಲೇ ಹೀನಾಯವಾಗಿ ದುಡಿಸುವ ಮೂಲಕ ಎಂಆರ್‌ಪಿಎಲ್ ಸಂಸ್ಥೆಯ ಕೆಲವು ಉನ್ನತ ಮಟ್ಟದ ಅಧಿಕಾರಿಗಳು ಹುನ್ನಾರ ಮಾಡುತ್ತಿದ್ದಾರೆ ಮತ್ತು ಎಂಆರ್‌ಪಿಎಲ್ ಸಂಸ್ಥೆಯು ಎಲ್ಲಾ ಗೇಟ್‌ಗಳಲ್ಲಿ ಕಾರ್ಮಿಕರು ಒಳಗೆ ಹೋಗಲು ಎಚ್‌ಅರ್ ವಿಭಾಗ ಅನುಮತಿ ನೀಡಬೇಕು.
ಅಕ್ಟೋಬರ್ ತಿಂಗಳಲ್ಲಿ ಸಂಸ್ಥೆಯು ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಲಿಲ್ಲ ಅದನ್ನು ಹೆಚ್ಚಳ ಮಾಡಬೇಕು ಯಾವುದೇ ಕಾರಣಕ್ಕೂ ಕೂಲಿ ಕಾರ್ಮಿಕರನ್ನು ಹೀನಾಯವಾಗಿ ದುಡಿಸಬಾರದು ಸಂಸ್ಥೆಯಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ ಅದನ್ನು ಪೂರ್ತಿಗೊಳಿಸಬೇಕು. ಎಂಆರ್‌ಪಿಎಲ್ ಸಂಸ್ಥೆಯು ಕೂಲಿ ಕಾರ್ಮಿಕರಿಗೆ ಬಹಳ ಕಠಿಣ ರೂಲ್ಸ್‌ಗಳನ್ನು ಮಾಡುತ್ತಿದೆ ಅದನ್ನು ಕೈ ಬಿಡಬೇಕು ಎಂಬಿತ್ಯಾದಿ ಬೇಡಿಕೆಯನ್ನು ಎಂಆರ್‌ಪಿಎಲ್ ಸಂಸ್ಥೆಯ ಮುಂದಿಟ್ಟಿದೆ.