ಅಂಗನವಾಡಿ ಕಟ್ಟಡದವನ್ನು ಉದ್ಘಾಟಿಸಿದ ಶಾಸಕ ಕಾಮತ್

ಅಂಗನವಾಡಿ ಕಟ್ಟಡದವನ್ನು ಉದ್ಘಾಟಿಸಿದ ಶಾಸಕ ಕಾಮತ್


ಮಂಗಳೂರು: ಮನಪಾ ವ್ಯಾಪ್ತಿಯ ವಾರ್ಡ್ ಸಂಖ್ಯೆ ೪೩ರ ಕುದ್ರೋಳಿ ಕಂಡತ್ತಪಳ್ಳಿಯಲ್ಲಿ ಸುಮಾರು 16.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟನೆಗೊಳಿಸಿದರು.

ಬಳಿಕ ಅವರು ಮಾತನಾಡಿ, 2022-23ನೇ ಸಾಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಯು ಮಂಜೂರಾಗಿದ್ದು, ಇದೀಗ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ. ಅಂಗನವಾಡಿ ಕೇಂದ್ರಗಳು ಈ ದೇಶದ ಭವಿಷ್ಯವಾಗಿರುವ ಮುಂದಿನ ಪೀಳಿಗೆಯನ್ನು ಉತ್ತಮ ಪ್ರಜೆಯನ್ನಾಗಿಸುವ ಮೊದಲ ಹಂತದ ಜ್ಞಾನ ದೇಗುಲಗಳು. ಇಲ್ಲಿ ಕಲಿಯುವ ಮಕ್ಳಳು ಮುಂದೆ ಈ ದೇಶದ ಭವಿಷ್ಯವನ್ನು ಬೆಳಗಲಿ ಎಂದು ಹಾರೈಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಅರ್ಷಾದ್ ಪೋಪಿ, ಮಾಜಿ ಕಾರ್ಪೋರೇಟರ್ ಗಳಾದ ಶಂಸುದ್ದಿನ್, ಅಝೀಜ್ ಕುದ್ರೋಳಿ, ಪ್ರಮುಖರಾದ ದಿನೇಶ್ ಕಾಮತ್, ಅಮರ್ ಸುವರ್ಣ, ಕಬೀರ್ ಬಂದರ್, ಅಂಗನವಾಡಿ ಕೇಂದ್ರದ ಸಿಬ್ಬಂದಿಗಳು, ವಿವಿಧ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article