ಪಾಲಿಪ್ರೊಪಿಲಿನ್ ಮೊದಲ ಕಂಟೇನರ್ ರ‍್ಯಾಕ್‌ಗೆ ಚಾಲನೆ ನೀಡಿದ ಕೊಂಕಣ ರೈಲ್ವೆ

ಪಾಲಿಪ್ರೊಪಿಲಿನ್ ಮೊದಲ ಕಂಟೇನರ್ ರ‍್ಯಾಕ್‌ಗೆ ಚಾಲನೆ ನೀಡಿದ ಕೊಂಕಣ ರೈಲ್ವೆ


ಮಂಗಳೂರು: ಸರಕು ಸಾರಿಗೆ ಸಾಮರ್ಥ್ಯ ವಿಸ್ತರಣೆ ಹಾಗೂ ಬಹುಮಾದ್ಯಮ ಲಾಜಿಸ್ಟಿಕ್ಸ್ ಬಲವರ್ಧನೆ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ, Konkan Railway ತೋಕೂರು ನಿಲ್ದಾಣದಿಂದ ಪಾಲಿಪ್ರೊಪಿಲಿನ್‌ನ ಮೊದಲ ಕಂಟೇನರ್ ರ‍್ಯಾಕ್‌ಗೆ ಇಂದು ಅಧಿಕೃತ ಚಾಲನೆ ನೀಡಿದೆ. ಇದರೊಂದಿಗೆ ಕೊಂಕಣ ರೈಲ್ವೆ ಜಾಲದಲ್ಲಿ ಹೊಸ ಕಂಟೇನರ್ ಸರಕು ಸಂಚಾರಕ್ಕೆ ಚಾಲನೆ ದೊರೆತಿದೆ.

ಈ ಹೊಸ ಸರಕು ಸಂಚಾರದಲ್ಲಿ, ಮೊದಲ ಕಂಟೇನರ್ ರ‍್ಯಾಕ್ ತೋಕೂರು ನಿಲ್ದಾಣದಿಂದ ಹೊರಟಿತು. ಕಂಟೇನರ್ ಹಾಗೂ ಇತರೆ ಸರಕು ಸಂಚಾರಕ್ಕೆ ಅನುಕೂಲವಾಗುವಂತೆ, ಕೊಂಕಣ ರೈಲ್ವೆ ಮತ್ತು Central Warehousing Corporation (CWC) ಸಹಯೋಗದಲ್ಲಿ ತೋಕೂರು ನಿಲ್ದಾಣದಲ್ಲಿ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಪೇವ್ಡ್ ವೇರ್‌ಫ್, ಸಂಪರ್ಕ ರಸ್ತೆಗಳು, ಮುಚ್ಚಿದ ಗೋದಾಮುಗಳು, ಓಪನ್ ಸ್ಟ್ಯಾಕ್ ಯಾರ್ಡ್ ಸೇರಿದಂತೆ ಸುಧಾರಿತ ಲಾಜಿಸ್ಟಿಕ್ಸ್ ಸೌಲಭ್ಯಗಳು ಇಲ್ಲಿ ಲಭ್ಯವಿವೆ.

ಸಾಗಿಸಲಾಗುತ್ತಿರುವ ಪಾಲಿಪ್ರೊಪಿಲಿನ್ Mangalore Refinery and Petrochemicals Limited (MRPL)ಗೆ ಸೇರಿದೆ. ಸರಾಸರಿಯಾಗಿ ತಿಂಗಳಿಗೆ ಎರಡು ಕಂಟೇನರ್ ರೈಕ್‌ಗಳನ್ನು ರಾಜಸ್ಥಾನದ ಮೊರ್ಬಿ ಪ್ರದೇಶಕ್ಕೆ ಸಾಗಿಸಲು MRPL ಒದಗಿಸುವ ನಿರೀಕ್ಷೆಯಿದೆ. ಈ ಸಂಚಾರವನ್ನು CWCಗೆ ಸೇರಿದ ಕಂಟೇನರ್ ರೈಕ್‌ಗಳ ಮೂಲಕ ನಿರ್ವಹಿಸಲಾಗುತ್ತಿದ್ದು, ಈ ಉದ್ದೇಶಕ್ಕಾಗಿ MRPL ಮತ್ತು CWC ನಡುವೆ ಅಧಿಕೃತ ಒಪ್ಪಂದವೂ ನಡೆದಿದೆ.

ಈ ಹೊಸ ಸರಕು ಸಂಚಾರದ ಮೊದಲ ರೈಕ್‌ಗೆ MRPL ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, CWC ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಸಿನ್ಹಾ, KRCL ವಾಣಿಜ್ಯ ಹಾಗೂ ಕಾರ್ಯಾಚರಣೆ ನಿರ್ದೇಶಕ ಸುನಿಲ್ ಗುಪ್ತಾ ಸೇರಿದಂತೆ MRPL, CWC ಮತ್ತು KRCLನ ಹಿರಿಯ ಅಧಿಕಾರಿಗಳು ಚಾಲನೆ ನೀಡಿದರು.

ತೋಕೂರು ನಿಲ್ದಾಣದಲ್ಲಿ ಲಭ್ಯವಿರುವ ಸುಧಾರಿತ ಸೌಲಭ್ಯಗಳನ್ನು ಇತರೆ ಗ್ರಾಹಕರೂ ಬಳಸಿಕೊಳ್ಳಲು ಈ ಬೆಳವಣಿಗೆ ದಾರಿ ತೆರೆದಿದ್ದು, ಪ್ರದೇಶದ ಕೈಗಾರಿಕಾ ವೃದ್ಧಿ ಹಾಗೂ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಲಿದೆ. ಗ್ರಾಹಕ ಕೇಂದ್ರೀಕೃತ, ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ಸರಕು ಪರಿಹಾರಗಳನ್ನು ಒದಗಿಸುವ ಕೊಂಕಣ ರೈಲ್ವೆಯ ಬದ್ಧತೆಯನ್ನು ಈ ಕ್ರಮ ಮತ್ತಷ್ಟು ಬಲಪಡಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article