ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ನಿಧನ: ಜಿಲ್ಲಾ ಬಿಜೆಪಿ ಸಂತಾಪ

ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ನಿಧನ: ಜಿಲ್ಲಾ ಬಿಜೆಪಿ ಸಂತಾಪ

ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ, ಖ್ಯಾತ ಕೈಗಾರಿಕೋದ್ಯಮಿ, ಶಿಕ್ಷಣ ತಜ್ಞ  ಹಾಗೂ ಮಹಾನ್ ದಾನಿ ಎನ್. ವಿನಯ ಹೆಗ್ಡೆ (86) ಅವರ ನಿಧನವು ಸಂಪೂರ್ಣ ದೇಶಕ್ಕೆ ಅತೀವ ನೋವನ್ನುಂಟು ಮಾಡಿದೆ. 

ಗ್ರಾಮಗಳನ್ನು ಶಿಕ್ಷಣ ಕೇಂದ್ರಗಳಾಗಿ ರೂಪಿಸಿದ ಅವರ ದೂರದೃಷ್ಟಿ, ಯುವ ಜನತೆಗೆ ಶಕ್ತಿಯುತ ಭವಿಷ್ಯವನ್ನು ಕಟ್ಟಿಕೊಟ್ಟ ಅವರ ಸೇವಾಭಾವ ಹಾಗೂ ಶಿಕ್ಷಣ-ಸಮಾಜ ಕ್ಷೇತ್ರಗಳಿಗೆ ನೀಡಿದ ಅಮೂಲ್ಯ ಕೊಡುಗೆಗಳು ಸದಾಕಾಲ ಸ್ಮರಣೀಯ ಸರಳತೆ, ಮಾನವೀಯತೆ ಮತ್ತು ನಾಯಕತ್ವದ ಪ್ರತೀಕವಾಗಿದ್ದ ಅವರು ಅನೇಕ ಪೀಳಿಗೆಗಳಿಗೆ ಪ್ರೇರಣೆಯಾಗಿ ಉಳಿಯುವರು.

ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಪ್ರತಾಪಸಿಂಹ ನಾಯಕ್, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಕ್, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಪಿ., ಮಾಜಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್, ನಾಗರಾಜ್ ಶೆಟ್ಟಿ, ಎಸ್. ಅಂಗಾರ, ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್ ಹಾಗೂ ಜಿಲ್ಲಾ ಕೋಶಾಧಿಕಾರಿ ಸಂಜಯ ಪ್ರಭು ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article