ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಕಾರ್ಮಿಕ ಕಾನೂನುಗಳು ಬಲಿ: ವಸಂತ ಆಚಾರಿ
ಸಾಮಾಜಿಕ ಭದ್ರತೆ ಕನಸಿನ ಮಾತಾಗುತ್ತಿದೆ. 147 ಕೋಟಿ ಜನಸಂಖ್ಯೆಯ ಭಾರತದಲ್ಲಿ ಬಹುತೇಕ ಕಾರ್ಮಿಕ ವರ್ಗ 93ಶೇ. ಅಸಂಘಟಿತ ಕಾರ್ಮಿಕರು ಮತ್ತು 7ಶೇ. ಸಂಘಟಿತ ಕಾರ್ಮಿಕರು. ಗುತ್ತಿಗೆ ಕಾರ್ಮಿಕ ಪದ್ದತಿಯಿಂದ ಕಾನೂನು ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಕಾರ್ಮಿಕರ ಪ್ರಬಲ ವಿರೋಧದ ಮದ್ಯೆ ಬಂಡವಾಳಗಾರರ ಹಿತಾಸಕ್ತಿಯನ್ನು ಕಾಪಾಡುವ ಸರಕಾರಗಳ ನೀತಿಗಳನ್ನು ಹಿಮ್ಮೆಟಿಸಬೇಕಾಗಿದೆ. ಕೇರಳ ರಾಜ್ಯ ಸರಕಾರ ಪರ್ಯಾಯ ಕಾರ್ಯಕ್ರಮವನ್ನು ಸಂಹಿತೆಗಳ ವಿರುದ್ಧ ನೀಡಿದೆ. ಆದರೆ ಸಿಧ್ಧರಾಮಯ್ಯ ಸರಕಾರ ಬಿಜೆಪಿ ಕೇಂದ್ರ ಸರಕಾರದ ನೀತಿಗಳ ಪರವಾಗಿ ನಿಯಮಾಳಿಯ ಕರಡು ತಯಾರಿಸಿದೆ. ಇದು ತೀರಾ ಅನ್ಯಾಯ. ಫೆಬ್ರವರಿ 12ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಎಲ್ಲಾ ವಿಭಾಗದ ಜನತೆ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಕೆ. ಯಾದವ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ನಾಶಗೈಯುತ್ತಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳ್ಳುತ್ತಿದೆ. ಬೀಜ ನೀತಿ ರೈತರಿಗೆ ಮಾರಕವಾಗಿದೆ ಎಂದು ಹೇಳಿದರು.
ವಸಂತ ಆಚಾರಿ ಅವರು ಜಾಥಾ ತಂಡದ ನಾಯಕರಾದ ರಾಧಾ ಮತ್ತು ನೋಣಯ ಗೌಡರಿಗೆ ಕೆಂಬಾವುಟವನ್ನು ಹಸ್ತಾಂತರಿಸಿದರು. ನಾಯಕಿ ರಮಣಿ ಸ್ವಾಗತಿಸಿದರು. ಪಾದಯಾತ್ರೆಯ ನೇತೃತ್ವವನ್ನು ಸಿಐಟಿಯು ಮುಂದಾಳುಗಳಾದ ಸದಾಶಿವದಾಸ್, ಗಿರಿಜ, ಶಂಕರ, ವಸಂತಿ, ಭವ್ಯ ಮುಚ್ಚೂರು, ಲಕ್ಷ್ಮಿ, ಕೃಷ್ಣಪ್ಪ, ಹೊನ್ನಯ್ಯ, ಬಾಬು ಪೂಜಾರಿ, ಕೃಷ್ಣಪ್ಪ ಪೂಜಾರಿ, ಬೇಬಿ, ಪದ್ಮಾವತಿ, ಲತಾ ಮತ್ತು ರಕ್ಷಾ ವಹಿಸಿದ್ದರು.

