ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕರಿಂಜೆ ಅಜ್ಜೊಟ್ಟು ಮನೆಯ ಕೃಷಿಕ ದಿ. ಲಾರೆನ್ಸ್ ಪಿರೇರಾ ಅವರ ಪತ್ನಿ ಬೆನೆಡಿಕ್ಟಾ ಪಿರೇರಾ (88ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಶ್ರಮಜೀವಿಯಾಗಿದ್ದ ಅವರು ಕೃಷಿ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.