ಕೃಷಿಕ ದಿನೇಶ್ ಎಂ. ಬಂಗೇರಾ ನಿಧನ
Tuesday, January 27, 2026
ಮೂಡುಬಿದಿರೆ: ಇಲ್ಲಿನ ಮಾಸ್ತಿ ಕಟ್ಟೆ ಸಮೀಪದ ಏದಾಡಿ ನಿವಾಸಿ, ಕೃಷಿಕ ದಿನೇಶ್ ಎಂ. ಬಂಗೇರ (71) ಅವರು ಸೋಮವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಪುತ್ರರಾದ ಪತ್ರಕರ್ತ ಸುನಿಲ್ ಬಂಗೇರ, ಪುತ್ರಿ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ದಿವ್ಯಾ, ಅಳಿಯ, ಸೊಸೆ ಸೇರಿದಂತೆ ಅಪಾರ ಬಂಧು–ಮಿತ್ರರನ್ನು ಅಗಲಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಕೊಯಿಲದವರಾದ ಇವರು ಸಿದ್ಧಕಟ್ಟೆ, ರಾಯಿ ಪ್ರದೇಶದಲ್ಲಿ ಕೆಲ ವರ್ಷ ನೆಲೆಸಿದ್ದು, ಕಳೆದ ಕೆಲವು ವರ್ಷಗಳಿಂದ ಮೂಡುಬಿದಿರೆಯ ಏದಾಡಿಯಲ್ಲಿ ವಾಸವಾಗಿದ್ದರು.