ಮಂಗಳೂರು-ಬೆಂಗಳೂರು ಇನ್ನೂ ಹತ್ತಿರ: ಶೀಘ್ರ ವಂದೇ ಭಾರತ್ ರೈಲು ಸಂಚಾರ
ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಯಾದ ‘ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು’ ಶೀಘ್ರವೇ ಸಂಚರಿಸಲಿದ್ದು, ಈ ಮೂಲಕ ಪ್ರಯಾಣದ ಅವಧಿ ಐದು ತಾಸಿಗೆ ಇಳಿಯಲಿದೆ.
ಘಾಟಿ ವಿದ್ಯುದ್ದೀಕರಣ..
ಘಾಟಿ ಪ್ರದೇಶ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಈ ಅರೆ-ಹೈ-ಸ್ಪೀಡ್ ರೈಲು ಸೇವೆ ಆರಂಭವಾಗಲಿದ್ದು, 9 ಗಂಟೆಗಳ ಪ್ರಯಾಣವನ್ನು 5 ಗಂಟೆಗೆ ಇಳಿಸಲಿದೆ. ಇದು ಕರಾವಳಿ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.
ಈ ರೈಲು ಮಾರ್ಗದ ವಿದುದ್ದೀಕರಣ ಕಾರ್ಯ ಪೂರ್ಣಗೊಂಡಿರುವುದರಿಂದ ಬೆಂಗಳೂರು ಹಾಗೂ ಮಂಗಳೂರು ನಡುವಿನ ರೈಲು ಸಂಪರ್ಕ ಜಾಲ ಮಟ್ಟಷ್ಟು ಸುಧಾರಣೆಯಾಗಲಿದ್ದು, ಪ್ರಯಾಣಿಕರ ಸಂಚಾರದ ಜತೆಗೆ ಮಂಗಳೂರಿಗೆ ಸರಕು ಸಾಗಣೆ ಜತೆಗೆ ಬಂದರು ಹಾಗೂ ವ್ಯಾಪಾರ ಚಟುವಟಿಕೆಗಳ ವೃದ್ಧಿಗೂ ಮತ್ತಷ್ಟು ಅನುಕೂಲ ಕಲ್ಪಿಸಲಿದೆ. ಆ ಮೂಲಕ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಅತ್ಯಂತ ಪ್ರಮುಖ ರೈಲ್ವೆ ಮೂಲಸೌಕರ್ಯ ಸುಧಾರಿಸುವ ಬೇಡಿಕೆ ಈಡೇರಿದೆ
ವಂದೇ ಭಾರತ್ ಸಂಚಾರದ ಮೂಲಕ ಕರಾವಳಿ ಪ್ರದೇಶಗಳ ಪುಣ್ಯಕ್ಷೇತ್ರಕ್ಕೆ ಹೋಗುವವರಿಗೆ ಇದು ಒಳ್ಳೆಯ ಪ್ರಯಾಣ ನೀಡಲಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ನಂತರ ಯೋಜನೆಗೆ ಚಾಲನೆ ನೀಡಲಾಗುವುದು. ಈಗಾಗಲೇ ಈ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಅದಷ್ಟು ಬೇಗ ಈ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಸೆಮಿ ಹೈ ಸ್ಪೀಡ್..
ಸೆಮಿ ಹೈ-ಸ್ಪೀಡ್ ರೈಲು ಸಂಪೂರ್ಣವಾಗಿ ವಿದ್ಯುತ್ ಶಕ್ತಿಯಿಂದ ಚಲಿಸುವ ಕಾರಣ, ಇದು ಪ್ರಯಾಣದ ವೇಗವನ್ನು ಹೆಚ್ಚಿಸುತ್ತದೆ. ಜತೆಗೆ, ಸ್ವಚ್ಛವಾದ ಗಾಳಿ, ಮಾಲಿನ್ಯರಹಿತ ಪರಿಸರವನ್ನು ಉಂಟು ಮಾಡುತ್ತದೆ. ಜತೆಗೆ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ. ಮಂಗಳೂರು ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ವಂದೇ ಭಾರತ್ ರೈಲು ಓಡಾಟ ಆರಂಭಿಸುವ ಸಮಯ ಹತ್ತಿರವಾಗಿದೆ. ಸಾಮಾನ್ಯ ರೈಲುಗಳು ಈ ಮಾರ್ಗವನ್ನು ಕ್ರಮಿಸಲು ಸರಿಸುಮಾರು 9 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ವ್ಯಾಪಾರ ಪ್ರಯಾಣಿಕರು ಮತ್ತು ರಜಾದಿನಗಳಲ್ಲಿ ಈ ರೈಲು ಹೆಚ್ಚು ಸಹಾಯವಾಗಲಿದೆ. ಸೆಮಿ ಹೈ-ಸ್ಪೀಡ್ ಸೇವೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ, ಪ್ರವಾಸೋದ್ಯಮ, ವ್ಯಾಪಾರ ಪ್ರವಾಸಗಳಿಗೆ ಇದೊಂದು ಉತ್ತಮ ಆಯ್ಕೆಯಾಗಿರುತ್ತದೆಬೆಂಗಳೂರು, ತುಮಕೂರು, ಹಾಸನ ಮತ್ತು ಮಂಗಳೂರು ಎಂಬ ನಾಲ್ಕು ಜಿಲ್ಲೆಗಳಿಗೆ ಇದು ಅನುಕೂಲವಾಗಲಿದೆ. ಇದಕ್ಕೆ 50,000 ಕೋಟಿ ರೂ. ಬಜೆಟ್ ನೀಡಲಾಗಿದೆ
ಮಹತ್ವದ ಮೈಲಿಗಲ್ಲು..
ಅತ್ಯಂತ ಕಠಿಣ ಹಾಗೂ ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಈಡೇರಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. ಘಾಟ್ ಮಾರ್ಗದ ವಿದ್ಯುದ್ದೀಕರಣ ಯೋಜನೆಯು ನಮ್ಮ ಭಾಗದ ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ದೊಡ್ಡ ಮಟ್ಟದ ವೇಗ ನೀಡಲಿದ್ದು, ಕರಾವಳಿಗೆ ಸರಕು ಸಾಗಾಣೆ, ಬಂದರು ಕಾರ್ಯಾಚರಣೆ, ಸುಗಮ ರೈಲು ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎನ್ನುತ್ತಾರೆ ಸಂಸದ ಕ್ಯಾ. ಬ್ರಿಜೇಶ್ ಚೌಟ.