ಪ್ರಾಧ್ಯಾಪಿಕೆ ಶೈಲಾ ಕಾಮತ್ ಅವರಿಗೆ ಪಿಎಚ್‌ಡಿ ಪದವಿ
Wednesday, January 14, 2026
ಮಂಗಳೂರು: ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜು, ವಾಣಿಜ್ಯ ಹಾಗೂ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಶೈಲಾ ಕಾಮತ್ ಅವರ `An Empirical Study on Risk Management Strategies Adopted by Borrowers to Prevent NPA Status at Banks' ಎಂಬ ಮಹಾಪ್ರಬಂಧಕ್ಕಾಗಿ ಶ್ರೀನಿವಾಸ ವಿಶ್ವವಿದ್ಯಾಲಯವು ಗೌರವಿಸಿದೆ.
ಈ ಸಂಶೋಧನೆಯನ್ನು ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಾಮರ್ಸ್‌ನ ಸಂಶೋಧನಾ ಪ್ರಾಧ್ಯಾಪಕ ಡಾ. ರಮೇಶ್ ಎ. ಪೈ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಡಾ. ಶೈಲಾ ಕಾಮತ್ ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಮಧುಕರ್ ಕಾಮತ್ ಕೆ. ಅವರ ಧರ್ಮಪತ್ನಿ.