ವಿಜ್ಞಾನ ಕ್ವಿಜ್ ಸ್ಪರ್ಧೆ: ಪಾಂಡೇಶ್ವರ ಸರ್ಕಾರಿ ಶಾಲೆಗೆ ಪ್ರಶಸ್ತಿ

ವಿಜ್ಞಾನ ಕ್ವಿಜ್ ಸ್ಪರ್ಧೆ: ಪಾಂಡೇಶ್ವರ ಸರ್ಕಾರಿ ಶಾಲೆಗೆ ಪ್ರಶಸ್ತಿ


ಮಂಗಳೂರು: ಸಿಂಕ್ವಿಜಿಟಿವ್ ನಾಲ್ಕನೇ ಆವೃತ್ತಿಯ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಂಗಳೂರಿನ ಪಾಂಡೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಶಸ್ತಿ ಜಯಿಸಿದ್ದಾರೆ.

ಹೈದರಾಬಾದ್ನ ಸಾಹೇಬ್ನಗರ ಜಿಲ್ಲಾಪರಿಷತ್ ಹೈಸ್ಕೂಲ್ ಮತ್ತು ಬೆಂಗಳೂರಿನ ಅಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕೂಡಾ ಆಯಾ ಪ್ರಾಂತ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾಲ್ಕು ಆವೃತ್ತಿಗಳಲ್ಲಿ ಸುಮಾರು 30 ಸಾವಿರ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಸಂಯೋಜಿತ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಸೇವೆಗಳ ಸಂಸ್ಥೆಯಾದ ಸಿಂಜೀನ್ ಇಂಟರ್ನ್ಯಾಶನಲ್ ಲಿಮಿಟೆಡ್ ತನ್ನ ವಾರ್ಷಿಕ ವಿಜ್ಞಾನ ರಸಪ್ರಶ್ನೆ ಸಿಂಕ್ವಿಜಿಟಿವ್ನ ನಾಲ್ಕನೇ ಆವೃತ್ತಿಯನ್ನು ಬಯೋಕಾನ್ ಫೌಂಡೇಷನ್ ಮತ್ತು ಅಗಸ್ತ್ಯ ಇಂಟರ್ನ್ಯಾಷನಲ್ ಸಹಯೋಗದಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ಮತ್ತು ಹೈದ್ರಾಬಾದ್ಗಳ 200 ಸರ್ಕಾರಿ ಶಾಲೆಗಳಲ್ಲಿ ನಡೆಸಲಾಗಿತ್ತು.

ವಿಜೇತರಿಗೆ ಪದಕಗಳು ಮತ್ತು ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು, ವಿಜೇತರ ಶಾಲೆಗಳು ಸಂವಾದಾತ್ಮಕ ಡಿಜಿಟಲ್ ಕಲಿಕೆಯ ಸ್ಥಳಗಳಾಗಿ ಪರಿವರ್ತಿಸಲಾದ ಎಜ್ಯುಟೆಕ್ ಸಾಧನಗಳನ್ನು ಹೊಂದಿದ ಸುಸಜ್ಜಿತ ತರಗತಿ ಕೊಠಡಿಗಳನ್ನು ಬಹುಮಾನವಾಗಿ ನೀಡಲಾಯಿತು. ಒಟ್ಟಾರೆ ಉನ್ನತ ಸಾಧನೆ ಮಾಡಿದ ಶಾಲೆಗೆ ರೋಲಿಂಗ್ ಟ್ರೋಫಿಯನ್ನು ಸಹ ನೀಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article