ಬ್ರೇಕ್ ವೈಫಲ್ಯ, ಮೇಲ್ಸ್‌ತುವೆ ಗಾಡ್೯ ತಾಗಿ ನಿಂತ ಬಸ್
Friday, January 9, 2026
ಬಂಟ್ವಾಳ: ಮಂಗಳೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಸಿ.ಸಿ.ಬಸ್‌ವೊಂದರ ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ಬಿ.ಸಿ.ರೋಡಿನ ಮೇಲ್ಸ್‌ತುವೆಗೆ ಬಡಿದು ಸೇಫ್ ಆಗಿ ನಿಂತ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಉಪ್ಪಿನಂಗಡಿಯತ್ತ ತೆರಳುತ್ತಿದ್ದ ಸೆಲಿನಾ ಹೆಸರಿನ ಕ್ರಾಂಟ್ರಾಕ್ಟ್ ಕ್ಯಾರೇಜ್ ಬಸ್ ಬಿ.ಸಿ.ರೋಡಿನ ಪ್ಲೈ ಓವರ್ ತಲುಪುತ್ತಿದ್ದಂತೆ ಬ್ರೇಕ್ ವೈಫಲ್ಯಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಸಂಚರಿಸಿ ದ್ವಿಚಕ್ರ ವಾಹನ ಹಾಗೂ ಪೋರ್ಚನರ್ ಕಾರಿಗೆ ಢಿಕ್ಕಿಯಾಗಿ ರಸ್ತೆ ಬದಿಯ ಕಬ್ಬಿಣದ ಗಾಡ್೯ಗೆ ಸವರಿಕೊಂಡು ಬಂದು ನಿಂತಿದೆ.
ಸಂಜೆಯ ಪೀಕ್ ಅವರ್ ಅಗಿದ್ದರಿಂದ ಒಂದುಕಡೆಯಿಂದ ವಾಹನ ದಟ್ಟಣೆ ಹಾಗೂ ಜನಸಂಚಾರ ಇದ್ದು, ಬಸ್ಸಿನಲ್ಲು ಪ್ರಯಾಣಿಕರು ತುಂಬಿದ್ದರು. ಬಸ್ ನಿಲುಗಡೆಯಾಗುತ್ತಿದ್ದರಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಭಯ ಬೀತರಾಗಿ ದಡಬಡಿಸಿ ಬಸ್ ಇಳಿದುನಿಟ್ಟುಸಿರು ಬಿಟ್ಟರು. ಬಸ್ಸ್, ಕಾರಿಗೆ ಹಾನಿಯಾದರೆ ಉಳಿದಂತೆ ಯಾವುದೇ ಅಪಾಯ ಸಂಭವಿಸಿಲ್ಲ.
ಈ ನಡುವೆ ಸ್ಕೂಟರ್ ಸವಾರ ತನ್ನ ವಾಹನ ಬಿಟ್ಟು ಹಾರಿದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನ ಜೀವ ಉಳಿದುಕೊಂಡಿದೆ. ಘಟನೆಯಿಂದ ಕೆಲ ಹೊತ್ತು ಸಂಚಾರದಲ್ಲಿ ಅಡಚಣೆಯುಂಟಾಯಿತು. ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಹೊಂಡರು.