ವೆನೆಜುವೆಲಾ ದೇಶದ ಮೇಲಿನ ಅಮೇರಿಕಾ ಧಾಳಿ ಖಂಡಿಸಿ ಮಂಗಳೂರಿನಲ್ಲಿ ಸಮಾನ ಮನಸ್ಕರಿಂದ ಪ್ರತಿಭಟನೆ
ಪ್ರತಿಭಟನೆ ಉದ್ದೇಶಿಸಿ ಸಿಪಿಐಮ್ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಅಮೇರಿಕಾ ಜಗತ್ತಿನ ತೈಲ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾರುವುದಕ್ಕಾಗಿ ದಕ್ಷಿಣ ಅಮೇರಿಕಾದ ಪುಟ್ಟ ರಾಷ್ಟ್ರ ವೆನೆಜುವೆಲಾ ಮೇಲೆ ಧಾಳಿ ಮಾನವ ಹತ್ಯೆ ಮಾಡಿದೆ, ವೆನೆಜುವೆಲಾ ಸೇನಾ ನೆಲೆಗಳನ್ನು ವಶಪಡಿಸಿ ಅಲ್ಲಿನ ಅಧ್ಯಕ್ಷರಾದ ನಿಕೋಲಸ್ ಮಡೊರೊ ಮತ್ತು ಅವರ ಪತ್ನಿಯನ್ನು ಅಪಹರಿಸಿರುವ ಕೃತ್ಯ ಅತ್ಯಂತ ಅಮಾನವೀಯವಾದುದು ಮತ್ತು ಜಾಗತಿಕ ಶಾಂತಿಗೆ ಅಮೇರಿಕ ಹಿಂಸೆಯ ಮೂಲಕ ತಡೆ ಒಡ್ದುತ್ತಿದೆ ಎಂದು ಅವರು ಹೇಳಿದರು.
ಪ್ರತಿಭಟನೆನ್ನುದ್ದೇಶಿಸಿ ಸಮುದಾಯದ ವಾಸುದೇವ ಉಚ್ಚಿಲ ಹಾಗೂ ದಲಿತ ನಾಯಕ ಎಂ. ದೇವದಾಸ್ ಅವರು ಮಾತನಾಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ,ಡಾ ಕೃಷ್ಣಪ್ಪ ಕೊಂಚಾಡಿ, ಬಿ.ಕೆ ಇಮ್ತಿಯಾಜ್, ಜಯಂತಿ ಶೆಟ್ಟಿ, ಪ್ರಮೀಳಾ, ಭಾರತಿ ಬೋಳಾರ, ಪ್ರಮೋದೀನಿ, ಯೋಗೀತಾ ಸುವರ್ಣ ವಿಲಾಸಿನಿ, ಸುಹಾಸಿನಿ,ಸುನಿಲ್ ಕುತ್ತಾರ್, ಜಗದೀಶ್ ಬಜಾಲ್, ಪಿ ಜಿ ರಫೀಕ್, ಬಿಲ್ಲಾಳ್ ಬೆಂಗ್ರೆ, ಕೃಷ್ಣ ತಣ್ಣೀರುಬಾವಿ, ನಾಗೇಶ್, ರಾಕೇಶ್ ಕುಂದರ್, ವಿಶ್ವನಾಥ ಮಂಜನಾಡಿ, ರಫೀಕ್ ಹರೇಕಳ, ಕೆ ಎಚ್ ಇಕ್ಬಾಲ್,ನಾಗೇಶ್ ಕೋಟ್ಯಾನ್, ತಿಮ್ಮಪ್ಪ ಕೊಂಚಾಡಿ, ಶ್ರೀನಾಥ್ ಕುಲಾಲ್, ರೋಹಿದಾಸ್ ಭಟ್ನಗರ, ಮುಜಾಫರ್ ಅಹ್ಮದ್, ಎಂ ಎನ್ ಶಿವಪ್ಪ, ಮೈಖೆಲ್ ಡಿಸೋಜಾ, ರಮೇಶ್ ಉಳ್ಳಾಲ್, ರಮೇಶ್ ಸುವರ್ಣ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.
