ಕುಮಾರಧಾರದಲ್ಲಿ ಮುಳುಗಿ ಇಬ್ಬರು ಸಾವು

ಕುಮಾರಧಾರದಲ್ಲಿ ಮುಳುಗಿ ಇಬ್ಬರು ಸಾವು

ಮಂಗಳೂರು: ಸುಬ್ರಹ್ಮಣ್ಯ ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜ.18ರ ಸಂಜೆ ಸಂಭವಿಸಿದೆ.

ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನ ಹರಿಪ್ರಸಾದ್ (37) ಹಾಗೂ ಸುಜಿತ್ (26) ಮೃತರು.ಮೃತರು ಇಬ್ಬರೂ ಅವಿವಾಹಿತರು.

ಈ ಇಬ್ಬರು ಯುವಕರು ಸೇರಿದಂತೆ ಕೆಲವರು ರವಿವಾರ ಸ್ನಾನಕ್ಕೆ ಕುಮಾರಧಾರ ನದಿಗೆ ಕುಲ್ಕುಂದ ಬಳಿ ಇಳಿದಿದ್ದು, ಈ ವೇಳೆ ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ನೀರಲ್ಲಿ ಮುಳುಗಿದ ಇಬ್ಬರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ.  ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article