ಬಿ.ಜೆ.ಪಿ. ನೂತನ ರಾಷ್ಟ್ರಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ ಅವರಿಗೆ ದ.ಕ. ಬಿಜೆಪಿ ಅಭಿನಂದನೆ
Tuesday, January 20, 2026
ಮಂಗಳುರು: ಭಾರತೀಯ ಜನತಾ ಪಾರ್ಟಿಯ ನೂತನ ರಾಷ್ಟ್ರಧ್ಯಕ್ಷರಾಗಿ ನಿತಿನ್ ನಬಿನ್ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸುವ ಮೂಲಕ ಪಕ್ಷದ ಹಿರಿಯರು, ಹೊಸತನ, ಯುವ ನಾಯಕತ್ವವನ್ನು ಬೆಳೆಸುವ ಸ್ಪಷ್ಟ ಸಂದೇಶವನ್ನು ನೀಡುವುದರ ಜತೆಗೆ ಪಕ್ಷದಲ್ಲಿರುವ ಆಂತರಿಕ ಒಮ್ಮತ ಮತ್ತು ಶಿಸ್ತಿನ ಪರಿಚಯವನ್ನು ತೋರಿಸಿದ್ದಾರೆ.
ಪಕ್ಷದ ನೂತನ ರಾಷ್ಟ್ರಧ್ಯಕ್ಷರಾದ ನಿತಿನ್ ನಬಿನ್ ಅವರ ಆಯ್ಕೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಹರ್ಷವನ್ನು ವ್ಯಕ್ತ ಪಡಿಸುತ್ತದೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.