ಮೆಸ್ಕಾಂ ಸಮಸ್ಯೆ: ರಾಜೇಶ್ ಕಡಲಕೆರೆಯಿಂದ ಸಮಸ್ಯೆ ಪರಿಹಾರ
Tuesday, January 20, 2026
ಮೂಡುಬಿದಿರೆ: ಪಾಲಡ್ಕ ಗ್ರಾಮದ ವಣ೯ಬೆಟ್ಟು ಶಾಲೆಯ ಬಳಿಯ ಸಾವ೯ಜನಿಕರು ಹಲವಾರು ತಿಂಗಳುಗಳಿಂದ ವಿದ್ಯುತ್ ಕೇಬಲ್ ಮತ್ತು ಇತರ ಸಮಸ್ಯೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಸ್ಥಳೀಯರಾದ ಗಣೇಶ್ ಶೆಟ್ಟಿ ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಅವರ ಗಮನಕ್ಕೆ ತಂದಿದ್ದರು.
ರಾಜೇಶ್ ಕಡಲಕೆರೆ ಮೆಸ್ಕಾಂ ಮೇಲಾಧಿಕಾರಿಗಳನ್ನು ಸಂಪಕಿ೯ಸಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರು. ಮೆಸ್ಕಾಂ ಅಧಿಕಾರಿಗಳು ತಕ್ಷಣ ಕಾಯ೯ಪ್ರವೃತರಾಗಿ ಕಾಮಗಾರಿ ನಡೆಸಿ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.