ಸ್ಪೂತಿ೯ ಕಲಾ ಸಂಭ್ರಮ-2025: ಹಿರಿಯ ಪತ್ರಕತ೯ ಧನಂಜಯ ಮೂಡುಬಿದಿರೆಗೆ "ಸ್ಪೂತಿ೯ರತ್ನ" ಪ್ರಶಸ್ತಿ ಪ್ರದಾನ
ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಿರುವ ಶಯನ್, ಸಹಳಾ ಮತ್ತು ರಂಜಿತ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾವಧ೯ಕ ಸಂಘದ ಹಿರಿಯರಾದ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಹಾಗೂ ಕಲೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಶಾಲೆಯ ಶಿಕ್ಷಕಿ ಸುಚಿತ್ರಾ ಅವರನ್ನು ಗೌರವಿಸಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಧನಂಜಯ ಮೂಡುಬಿದಿರೆ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಮಿತಿಗೆ ಗ್ರಾಮೀಣ ಮಟ್ಟದ ಪತ್ರಕತ೯ರನ್ನು ಸೇರಿಸಿಕೊಳ್ಳಬೇಕು., ರಾಜ್ಯೋತ್ಸವ ಪ್ರಶಸ್ತಿಗೆ ನೀಡಲಾಗುವ ಮಾನದಂಡವನ್ನು ಶೇ. 10ರಷ್ಟಾದರೂ ಜಿಲ್ಲಾ ಪ್ರಶಸ್ತಿಗೆ ನೀಡಿದರೆ ಉತ್ತಮ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲೀಲಾಧರ ಬಿ. ಶೆಟ್ಟಿಗಾರ್, ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಡಾ.ಅಮರಶ್ರೀ ಶೆಟ್ಟಿ, ಉದ್ಯಮಿಗಳಾದ ಅಬುಲಾಲ ಪುತ್ತಿಗೆ, ಸಿಎಚ್ ಅಬ್ದುಲ್ ಗಪೂರ್, ವಿದ್ಯಾವಧ೯ಕ ಸಂಘದ ಅಧ್ಯಕ್ಷ ಕಂಡಿಗ ರತ್ನಾಕರ ಶೆಟ್ಟಿ, ಸಂಚಾಲಕ ರಾಜೇಶ್ ಸುವರ್ಣ, ಹೆಲ್ಪಿಂಗ್ ಇಸ್ರೇಲ್ ತಂಡದ ಸುನಿಲ್ ಮೆಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಶಮಿ೯ಳಾ ವಾಸ್ ವರದಿ ವಾಚಿಸಿದರು. ಸಂಸ್ಥೆಯ ಪ್ರಮುಖರಾದ ಉಷಾಲತಾ ಸಹಕರಿಸಿದರು. ಸುಚಿತ್ರ ಪೂಜಾರಿ ಸನ್ಮಾನಿತರ ಪತ್ರ ವಾಚಿಸಿ ವಂದಿಸಿದರು.
ಸಾಂಸ್ಕೃತಿಕ ಕಾಯ೯ಕ್ರಮದ ಅಂಗವಾಗಿ ಸಭಾ ಕಾಯ೯ಕ್ರಮದ ಮೊದಲು ಸ್ವಪ್ತಸ್ವರ ಮೆಲೋಡಿಸ್ ನ ಉಮೇಶ್ ಕೋಟ್ಯಾನ್ ಬಳಗ ವಾಮದಪದವು ಇವರಿಂದ ಉದಯಗಾನ ಸಂಭ್ರಮ ಮಧ್ಯಾಹ್ನ ವಾಯ್ಸ್ ಆಫ್ ಆರಾಧನ ತಂಡದ ಮಕ್ಕಳಿಂದ ಹಾಗೂ ಸ್ಫೂರ್ತಿ ಶಾಲಾ ವಿಶೇಷ ಚೇತನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ನಡೆಯಿತು.
ಸಂಜೆ ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿ ಮೂಡುಬಿದಿರೆ ಹಾಗೂ ಎಂ.ಜೆ ಸ್ಟೆಪ್ ಆಫ್ ಡ್ಯಾನ್ಸ್ ಸ್ಟುಡಿಯೋ ಮೂಡುಬಿದಿರೆ ಇವರಿಂದ ನೃತ್ಯ ಸಂಭ್ರಮ ಸಿಂಧೂರ ಕಲಾವಿದೆರ್ ಕಾರ್ಲ ಇವರಿಂದ ತುಳು ಹಾಸ್ಯಮಯ ನಾಟಕ ಪನೊಡಿತ್ತ್ಂಡ್ ಸ್ವಾರಿ ಪ್ರದಶ೯ನಗೊಂಡಿತು.



