ಅಂತರ ಫೋರಂಗಳ ಸ್ಪರ್ಧೆ ‘ಇನಾಮು-2026’ ಉದ್ಘಾಟನೆ

ಅಂತರ ಫೋರಂಗಳ ಸ್ಪರ್ಧೆ ‘ಇನಾಮು-2026’ ಉದ್ಘಾಟನೆ

ಹೊಸತನ ಮತ್ತು ಸೃಜನಶೀಲತೆ ಬೆಳವಣಿಗೆಯ ವೇಗ ಹೆಚ್ಚಿಸುತ್ತದೆ: ವಿವೇಕ್ ಆಳ್ವ


ಮೂಡುಬಿದಿರೆ: ಆಳ್ವಾಸ್ ಪದವಿ ಸ್ವಾಯತ್ತಾ ಕಾಲೇಜಿನ 22 ಅಂತರ ಫೋರಂಗಳ ಸ್ಪರ್ಧೆ ‘ಇನಾಮು-2026’ರ ಕಾಯ೯ಕ್ರಮವು ಶುಕ್ರವಾರ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಕಾಲೇಜು ಫೋರಂಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸುವುದು ಈ ಫೋರಂಗಳ ಮುಖ್ಯ ಉದ್ದೇಶ. ಇವು ವಿದ್ಯಾರ್ಥಿಗಳಲ್ಲಿನ ನಾಯಕತ್ವ, ಸಂವಹನ ಕೌಶಲ್ಯ, ಸಂಘಟನಾ ಸಾಮರ್ಥ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವೇದಿಕೆಗಳಾಗಿವೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ಸ್ವಾಯತ್ತಾ ಕಾಲೇಜು 22 ವಿವಿಧ ಫೋರಂಗಳನ್ನು ಹೊಂದಿರುವುದು ಹೆಮ್ಮೆಯ ವಿಷಯ.

ಸವಾಲುಗಳನ್ನು ಸ್ವೀಕರಿಸುವ ಮಾನಸಿಕತೆ ಬೆಳೆಸಿಕೊಳ್ಳಿ.  ಸೋಲು, ಟೀಕೆ, ವಿಫಲತೆ ಇವೆಲ್ಲವೂ ಜೀವನದ ಭಾಗವೇ. ಅವುಗಳಿಂದ ಕುಗ್ಗದೆ ಎದ್ದು ನಿಲ್ಲುವ ಶಕ್ತಿಯೇ ನಿಜವಾದ ಜಯದ ಗುಟ್ಟು.  ಜಾತಿ, ಧರ್ಮ, ಭಾಷೆ, ಪ್ರದೇಶದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವವರ ಬಲೆಗೆ ಎಂದೂ  ಬೀಳಬಾರದು. ಏಕತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವವೇ ನಮ್ಮ ನಿಜವಾದ ಶಕ್ತಿ. ಹಳೆಯ ಮಾರ್ಗದಲ್ಲಿ ನಡೆಯುವುದರಿಂದ ಯಶಸ್ಸು ಸೀಮಿತವಾಗಿರುತ್ತದೆ. ಹೊಸತನ ಮತ್ತು ಸೃಜನಶೀಲತೆ ನಮ್ಮ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತವೆ ಎಂದರು.

ಫೆಬ್ರವರಿ 2 ರಿಂದ ಮಾಚ್೯ 20ರ ತನಕ  ಮಾಡೆಲ್ ಪೇಕಿಂಗ್, ಪೋಸ್ಟರ್ ಮೇಕಿಂಗ್, ಕಟ್ ಔಟ್  ಅನಿಮೇಶನ್, ಸ್ಪೆಲ್‌ಮೇನಿಯಾ, ಬಾಟಲ್ ಪೈಂಟಿAಗ್, ಮೈಂಡ್ ಮಾರ್ಕೆಟಿಂಗ್, ನವರಸ, ಸ್ಕಿಟ್, ಕೇಸ್ ಕ್ವೆಸ್ಟ್, ಮೇಲೋಡಿ ವಿಥ್ ಎ ಮೆಸೇಝ್,  ಕೇರ್ ಫಾರ್ ವಿಂಗ್ಸ, ಡ್ಯಾನ್ಸ ವೆರೈಟಿ, ಫೋಕ್ ಗ್ರೂಪ ಸಾಂಗ, ಕ್ಲೇ ಮಾಡೆಲಿಂಗ್, ಸಿಕ್ರೆಟ್ ಫ್ಲಿಟಿಕ್ಸ್, ಸ್ಕಲ್ಪ÷್ಚರ್ ಆರ್ಟ, ಮೈಮ್ ಶೋ, ನಾಟ್ಯ ಸಂಗಮ, ಬಾಷಣ ಸ್ಪರ್ಧೆ, ಟಗ್ ಆಫ್ ವಾರ್, ಸೆಟ್‌ಅಪ್ ಪ್ಲಾನ್ ನಂತಹ ಸ್ಪರ್ಧೆಗಳು ನಡೆಯಲಿವೆ.  

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಫೋರಂಗಳ ಮುಖ್ಯ ಸಂಯೋಜಕ ಡಾ ಯೋಗೀಶ್ ಕೈರೋಡಿ, ಇನಾಮು ಕಾರ‍್ಯಕ್ರಮದ ಸಂಯೋಜಕ ಮನು ಡಿ.ಎಲ್., ಕೋರ್ ಕಮಿಟಿಯ ವಿದ್ಯಾರ್ಥಿ ಸಂಯೋಜಕ ನಿರ್ಮಲ್ ಪೈ ಉಪಸ್ಥಿತರಿದ್ದರು.

ರಶ್ಮಿ ಸ್ವಾಗತಿಸಿದರು. ಆಶ್ವಿಜಾ ಪ್ರಾರ್ಥಿಸಿದರು. ಪ್ರಥ್ವಿತಾ ಕಾರ‍್ಯಕ್ರಮ ನಿರೂಪಿಸಿದರು. ಶ್ರಾವ್ಯ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article