ಜ. 25ರಂದು ಕಲ್ಲಬೆಟ್ಟಿನಲ್ಲಿ ಹಿಂದೂ ಸಂಗಮ: ಆಮಂತ್ರಣ ಪತ್ರಿಕೆ ಬಿಡುಗಡೆ

ಜ. 25ರಂದು ಕಲ್ಲಬೆಟ್ಟಿನಲ್ಲಿ ಹಿಂದೂ ಸಂಗಮ: ಆಮಂತ್ರಣ ಪತ್ರಿಕೆ ಬಿಡುಗಡೆ


ಮೂಡುಬಿದಿರೆ: ಹಿಂದೂ ಸಂಗಮ ಆಯೋಜನಾ ಸಮಿತಿ ಮೂಡುಬಿದಿರೆ ತಾಲೂಕು, ಕಲ್ಲಬೆಟ್ಟು ಮಂಡಲದ (ಕಲ್ಲಬೆಟ್ಟು-ಕರಿಂಜೆ-ಮಾರೂರು ಗ್ರಾಮಗಳು) ವತಿಯಿಂದ ಜನವರಿ 25ರ ಭಾನುವಾರ ಕಲ್ಲಬೆಟ್ಟಿನ ಶ್ರೀ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ 'ಹಿಂದೂ ಸಂಗಮ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಯನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.

ಬಿಜೆಪಿ ಮುಖಂಡ, ವಕೀಲ ಎಂ. ಬಾಹುಬಲಿ ಪ್ರಸಾದ್  ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಕಾಯ೯ಕ್ರಮದ ಸಂಚಾಲಕ ನವೀನ್ ಮಾರೂರು, ಘಟಕ ಸಂಚಾಲಕ ವಿಶಾಲ್, ಪ್ರಮುಖರಾದ ಮಂಜುನಾಥ ಬೆಳುವಾಯಿ, ಕೃಷ್ಣಪ್ಪ ಕಲ್ಲಬೆಟ್ಟು, ರಮೇಶ್ ಚಂದ್ರ ಪಿ., ಶಿವಾನಂದ ಪೈ, ಸತೀಶ್ ಶೆಟ್ಟಿ, ಸುಶಾಂತ್ ಕರ್ಕೇರಾ,  ಕೆ. ಪ್ರದೀಪ್ ರೈ, ಸಂಪತ್ ನೆತ್ತೋಡಿ,  ಅರ್ಚಕರಾದ ಸೂರ್ಯರಾವ್ ಹಾಗೂ ಕಲ್ಲಬೆಟ್ಟು-ಕರಿಂಜೆ-ಮಾರೂರು ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ಈ ಸಂದಭ೯ದಲ್ಲಿದ್ದರು.

ಜ.25ರ ಮಧ್ಯಾಹ್ನ 3 ಗಂಟೆಗೆ ಮೂಡುಬಿದಿರೆ ಮಹಾವೀರ ಕಾಲೇಜು ಜಂಕ್ಷನ್‌ನಿಂದ "ವೈಭವದ ಶೋಭಾಯಾತ್ರೆ" ಆರಂಭಗೊಳ್ಳಲಿದ್ದು, ಕಲ್ಲಬೆಟ್ಟು ಶ್ರೀ ಮಹಮ್ಮಾಯಿ ದೇವಸ್ಥಾನದವರೆಗೆ ಸಾಗಲಿದೆ. ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಗಮಕ್ಕೆ ಭಕ್ತಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜನಾ ಸಮಿತಿ ವಿನಂತಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article