ನೃತ್ಯ ಮತ್ತು ಸಂಗೀತ ಮನಸ್ಸನ್ನು ಅರಳಿಸುತ್ತದೆ: ಮೂಡುಬಿದಿರೆ ಸ್ವಾಮೀಜಿ
ಅವರು ಮೂಡುಬಿದಿರೆ ಸ್ಕೈ ಪೈಂಟ್ಸ್ ಸಂಸ್ಥೆಯ ವತಿಯಿಂದ ಕನ್ನಡ ಭವನದಲ್ಲಿ ಭಾನುವಾರ ಸಂಜೆ ನಡೆದ ವಿಶೇಷ 'ಕರ್ನಾಟಕ ಶಾಸ್ತ್ರೀಯ ತ್ರಿವಳಿ ವಯಲಿನ್ ಸಂಗೀತ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಆಧ್ಯಾತ್ಮ ಹಾಗೂ ದೈವಿಕ ಅಂಶವುಳ್ಳ ಶಾಸ್ತ್ರೀಯ ಸಂಗೀತಕ್ಕೆ ಜರ್ಜರಿತವಾಗಿರುವ ಮನಸ್ಸನ್ನು ಶಾಂತಗೊಳಿಸುವ ಗುಣವಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಲಾವಿದರ ನಿರಂತರ ಸಾಧನೆಗೆ ಪೂರಕವಾಗಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ನೋಡುವುದಕ್ಕಿಂತ, ನೇರವಾಗಿ ಕಲಾವಿದರ ಎದುರು ಕುಳಿತು ಆಸ್ವಾದಿಸುವುದು ವಿಶೇಷ ಅನುಭವ ನೀಡುತ್ತದೆ. ಇದು ಕಲಾವಿದರಿಗೂ ಹೊಸ ಹುಮ್ಮಸ್ಸು ತುಂಬುತ್ತದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ನಾಗೇಂದ್ರ, ಕಾರ್ಯಕ್ರಮ ಸಂಘಟಕ ಎಂ. ಶೈಲೇಂದ್ರ ಕುಮಾರ್ ಆರೋಹ ಉಪಸ್ಥಿತರಿದ್ದರು. ಡಾ. ಪ್ರಭಾತ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು.
ತಿರುವನಂತಪುರದ ಸಹೋದರ-ಸಹೋದರಿ ಜೋಡಿಯಾದ ಮಹಾದೇವ ಶರ್ಮ ಮತ್ತು ರಾಜಶ್ರೀ ಅವರೊಂದಿಗೆ ಯುವ ಪ್ರತಿಭೆ ವೈದ್ಯನಾಥ ಶರ್ಮ ಅವರು ತ್ರಿವಳಿ ವಯಲಿನ್ ಕಚೇರಿ ನಡೆಸಿಕೊಟ್ಟರು. ಮೃದಂಗದಲ್ಲಿ ಡಾ. ಎ. ಜಯಕೃಷ್ಣನ್ ಹಾಗೂ ಘಟಂನಲ್ಲಿ ವೆಲ್ಲಂತಂಜೂರು ಶ್ರೀಜಿತ್ ಸಹಕರಿಸಿದರು.