ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ
ಕಾಲೇಜಿನ ಟ್ರಸ್ಟಿ ಮೆಹಬೂಬ್ ಬಾಷಾ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಪವಿತ್ರ ದಿನವು ನಮ್ಮ ದೇಶದ ಸ್ವಾತಂತ್ರ್ಯ, ಸಂವಿಧಾನ ಮತ್ತು ಏಕತೆಯ ಮಹತ್ವವನ್ನು ನೆನಪಿಸುವುದಾಗಿ ಹೇಳಿದರು. ಈ ವರ್ಷವೂ ಭಾರತವು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗಲಿ, ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಹೊಸ ಕನಸುಗಳು, ಹೊಸ ಆಶಯಗಳು ಮತ್ತು ಹೊಸ ಅವಕಾಶಗಳು ಮೂಡಿಬರಲಿ ಎಂದರು.
ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್ . ಎನ್. ವೆಂಕಟೇಶ್ ನಾಯಕ್ ರವರು ಮಾತನಾಡಿ,ಇಂದು ನಾವು ಕೇವಲ ಗಣರಾಜ್ಯೋತ್ಸವವನ್ನು ಮಾತ್ರ ಆಚರಿಸುತ್ತಿಲ್ಲ, ನಮ್ಮ ಸಂವಿಧಾನದ ಆತ್ಮವನ್ನೂ ಆಚರಿಸುತ್ತಿದ್ದೇವೆ. ಸಮಾಜದ ಹಿತಕ್ಕಾಗಿ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಸಂದೇಶವನ್ನು ಅವರು ನೀಡಿದನು.
ವೈಬ್ರೆಂಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಚಂದ್ರಶೇಖರ ರಾಜೇಅರಸ್, ಯೋಗೇಶ್ ಬೆಡೇಕರ್, ಡಾ.ಶರತ್ ಗೋರೆ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು .
ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ವಿದ್ಯಾರ್ಥಿಗಳಿಗಾಗಿ ಇಂದು ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಸಮರ್ಥಿನಿ ಸ್ವಾಗತಿಸಿದರು. ರಿಯಾ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ರಾಧಿಕಾ ನಿರೂಪಿಸಿದರು.
