ಉಳ್ಳಾಲ ತಾಲೂಕು ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ
ಅವರು ನಾಲ್ಕು ಕೋಟಿ ಅನುದಾನದಲ್ಲಿ ಅಸೈಗೋಳಿ ಬಳಿ ನಡೆಯಲಿರುವ ಉಳ್ಳಾಲ ತಾಲೂಕು ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪ್ರವಾಸಿ ಮಂದಿರ ನಿರ್ಮಾಣಕ್ಕೆ ಮುಡಿಪುನಲ್ಲಿ ಕಟ್ಟಲು ಜಾಗ ಇತ್ತು. ಆದರೆ ಜನ ಸಾಮಾನ್ಯರಿಗೆ ಕಷ್ಟ ಆಗುತ್ತೆ ಎಂಬ ಕಾರಣದಿಂದ ಅಸೈಗೋಳಿ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಂಗಳೂರು ವಿವಿ ನಿರ್ಮಾಣಗೊಂಡ ಜಾಗವನ್ನು ಆರಂಭದಲ್ಲಿ ಬೇರೆಯವರಿಗೆ ಕೊಟ್ಟಿತ್ತು. ಹಿರಿಯರು ತ್ಯಾಗ ಮಾಡಿದ ಕಾರಣ ವಿವಿ ಕೊಣಾಜೆಯಲ್ಲಿ ನಿರ್ಮಾಣ ಆಗಿದೆ. ನಮಗೆ ಒಟ್ಟು ಅಭಿವೃದ್ಧಿ ಆಗಬೇಕು. ಗ್ರಾಮೀಣ ಪ್ರದೇಶದಲ್ಲಿ ನೀರು, ವಿದ್ಯುತ್ ಸವಲತ್ತುಗಳು ಇರಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಕಣಚೂರು ಮೋನು, ಟಿ.ಎಸ್. ಅಬ್ದುಲ್ಲಾ, ರಮೇಶ್ ಬೋಳಿಯಾರ್, ಸದಾಶಿವ ಉಳ್ಳಾಲ್, ಎನ್.ಎಸ್. ಕರೀಮ್,
ಸುರೇಖಾ ಚಂದ್ರಹಾಸ್, ಮೊಹಮ್ಮದ್ ಮೋನು, ಮಮತಾ ಗಟ್ಟಿ, ನಾಸೀರ್ ನಡುಪದವು, ಸಲಾಮ್ ಉಚ್ಚಿಲ, ನಾಸೀರ್ ಅಹ್ಮದ್ ಸಾಮಾನಿಗೆ, ಅಚ್ಯುತ ಗಟ್ಟಿ, ಪುಷ್ಟಿ ಮೊಹಮ್ಮದ್, ಮುಸ್ತಫಾ ಮಲಾರ್, ಶೌಕತ್ ಆಲಿ, ಹಮೀದ್ ಹಸನ್ ಮಾಡೂರು, ಚಂದ್ರಿಕಾ ರೈ, ರಹ್ಮಾನ್ ಕೋಡಿಜಾಲ್, ರಾಜಾರಾಮ, ದಿನೇಶ್ ರೈ, ರಹ್ಮಾನ್ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.