ಸೂರ್ಯ ಜಯಂತಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ಸಂಪನ್ನ
Monday, January 26, 2026
ಶಿರ್ವ: ರಥಸಪ್ತಮಿಯ ಶುಭಾವಸರದಲ್ಲಿ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಳದ ವಠಾರದಲ್ಲಿ ರವಿವಾರ ಪತಂಜಲಿ ಯೋಗ ಸಮಿತಿ, ಉಡುಪಿ ಜಿಲ್ಲೆ ಮತ್ತು ಶಿರ್ವ ಇದರ ನೇತೃತ್ವದಲ್ಲಿ ಮಹಿಳಾ ಮಂಡಲ(ರಿ) ಶಿರ್ವ, ಯುವಕ ಮಂಡಲ(ರಿ) ಕುತ್ಯಾರು, ಮತ್ತು ಶಿರ್ವ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ‘ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞದ ದಶಮಾನೋತ್ಸವ’ ಕಾರ್ಯಕ್ರಮಕ್ಕೆ ಶ್ರೀದೇವಳದ ಅರ್ಚಕ ವೇ.ಮೂ. ರಘುರಾಮ ಶೆಣೈ ಶಿರ್ವ, ಬಂಟಕಲ್ಲು ರಾಮಕೃಷ್ಣ ಶರ್ಮಾ, ಪತಂಜಲಿ ಯೋಗ ಸಮಿತಿಯ ವಿನೋದ್ ಕಬ್ರಾಲ್, ಜಕ್ರಿಯಾ ಅಹಮ್ಮದ್, ಅಮೃತಾ ಶೆಟ್ಟಿ ಸಂಯಕ್ತವಾಗಿ ಚಾಲನೆ ನೀಡಿದರು.
ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಸಹಕಾರ ನೀಡುತ್ತಿರುವ ಸ್ಥಳೀಯ ಪರಿಸರದ 25 ಸಂಘಟನೆಗಳ ಪ್ರಮುಖರಿಗೆ ಶಿರ್ವ ಪತಂಜಲಿ ಯೋಗ ಸಮಿತಿಯ ಸಂಚಾಲಕ ಅನಂತ್ರಾಯ ಶೆಣೈ ಶಾಲು ಹಾಕಿ ಗೌರವಿಸಿದರು.
ಸ್ಥಳೀಯ ಪ್ರಮುಖರಾದ ಚಿದಾನಂದ ಪೈ, ಡಾ. ಪ್ರಭಾಕರ ನಾಯಕ್, ಬಬಿತಾ ಅರಸ್, ಸುಂದರ ಪ್ರಭು, ಪ್ರಸಾದ ಶೆಟ್ಟಿ ವಲದೂರು, ವಿಟ್ಠಲ ಅಂಚನ್, ಉಮೇಶ ಆಚಾರ್ಯ, ಹರಿ ಮಾಸ್ಟರ್ ಮುದರಂಗಡಿ, ಮನೋಜ ಕುಲಾಲ್, ರಮೇಶ ಶಾಸ್ತಿ ಸೂಡ ಸಹಿತ ವಿವಿಧ ಸಂಘಟನೆಗೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
‘ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ’ದಲ್ಲಿ 150ಕ್ಕೂ ಅಧಿಕ ಆಸಕ್ತರು ಪಾಲ್ಗೊಂಡಿದ್ದರು. ಅನಂತ್ರಾಯ ಶೆಣೈ ಪ್ರಸ್ಥಾವನೆಯೊಂದಿಗೆ ಸ್ವಾಗತಿಸಿ, ನಿರೂಪಿಸಿದರು. ಪತಂಜಲಿ ಯೋಗ ಸಮಿತಿ ಜಿಲ್ಲಾ ಕಾರ್ಯದರ್ಶಿ ರಂಜಿತ್ ಕೆ.ಎಸ್. ವಂದಿಸಿದರು.