ನಮ್ಮ ಸೇವೆಯನ್ನು ದೇಶಕ್ಕಾಗಿ ಮುಡಿಪಾಗಿಡೋಣ: ಶ್ರೀಧರ ಮುಂದಲಮನಿ
Monday, January 26, 2026
ಮೂಡುಬಿದಿರೆ: ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ. ಶಿಕ್ಷಣವಿಲ್ಲದ ಸಮಯದಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮೈಲಿಗಲ್ಲುಗಳನ್ನು ದಾಟಿ ಬಂದಿದ್ದು ನಾವು ಯಾವುದೇ ಕ್ಷೇತ್ರಕ್ಕೂ ಹೋದರೂ ಶ್ರದ್ಧಾ ಪೂವ೯ಕವಾದ ಸೇವೆ ದೇಶ ಸೇವೆಗೆ ಮುಡಿಪಾಗಿಡೋಣ ಎಂದು ತಾಲೂಕು ತಹಸೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಆಚರಿಸಿದ 77ನೇ ಗಣರಾಜ್ಯೋತ್ಸವದ ಧ್ವಜವನ್ನರಳಿಸಿ ಸಂದೇಶವನ್ನು ನೀಡಿದರು.
ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ವಿವಿಧ ತಂಡಗಳ ಪಥ ಸಂಚಲನದ ಗೌರವ ರಕ್ಷೆಯನ್ನು ಸ್ವೀಕರಿಸಿ ಮಾತನಾಡಿ ಸ್ವಾತಂತ್ರ್ಯ ಸಿಕ್ಕಿದ ನಂತರ ನೆಹರು, ಅಂಬೇಡ್ಕರ್ ಹಾಗೂ ರಾಜೇಂದ್ರ ಪ್ರಸಾದ್ ಅವರ ಮಾಗ೯ದಶ೯ನದಲ್ಲಿ ಸಂವಿಧಾನವನ್ನು ಅನುಷ್ಠಾನಗೊಳಿಸಿದ ನಂತರ ದೇಶ ಉತ್ತಮ ರೀತಿಯಲ್ಲಿ ನಡೆಯುತ್ತಾ ಬಂದಿದೆ.
ಮೂಡುಬಿದಿರೆಯಲ್ಲಿ ಅಭಿವೃದ್ಧಿ ಕಾಯ೯ಗಳು ನಡೆಯುತ್ತಾ ಬಂದಿದೆ. ತಾಲೂಕಿನಲ್ಲಿ ರೂ. 77ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಭರದಿಂದ ಸಾಗುತ್ತಿದ್ದು 4- 5 ತಿಂಗಳಲ್ಲಿ ಸಂಪೂಣ೯ಗೊಳ್ಳಲಿದೆ. ಡ್ರೈನೇಜ್ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಈಗಾಗಲೇ ಒಂದು ಎಕ್ರೆ ಜಾಗವನ್ನು ಗುರುತಿಸಲಾಗಿದೆ. 4.99 ಕೋಟಿ ವೆಚ್ಚದ ಅನುದಾನದಲ್ಲಿ ವ್ಯವಸ್ಥೆ ಮಾಡಲಾಗುವುದು. ಮಾಪಾ೯ಡಿಯಲ್ಲಿ ಅತೀ ಹೆಚ್ಚು ವಾಣಿಜ್ಯ ಕಟ್ಟಡಗಳು, ವಸತಿ ಸಮುಚ್ಛಯಗಳಿದ್ದು ಅಲ್ಲಿ ಉತ್ಪತ್ತಿಯಾಗುವ ಕೊಳಚೆಗೂ ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಬಡವರಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಈಗಾಗಲೇ 200 ಹಕ್ಕುಪತ್ರವನ್ನು ಸಿದ್ಧ ಪಡಿಸಲಾಗಿದ್ದು ಉಸ್ತುವಾರಿ ಸಚಿವರು ಬಂದಾಗ ವಿತರಿಸಲಾಗುವುದು ಎಂದ ಅವರು ಅಭಿವೃದ್ಧಿ ಕಾಯ೯ಗಳು ನಡೆಯುವಾಗ ಎಲ್ಲರ ಸಹಕಾರವೂ ಅಗತ್ಯ ಎಂದರು.
ಸನ್ಮಾನ: ಸರಕಾರಿ ಇಲಾಖೆಯ ಲ್ಲಿ ಉತ್ತಮ ಸೇವೆ ಸಲ್ಲಿಸಿರುವ ರಾಜೇಶ್ ಎ.ಎಸ್.ಐ (ಪೊಲೀಸ್ ಇಲಾಖೆ), ಉಪ ವಲಯಾರಣ್ಯಾಧಿಕಾರಿ ರಾಘವೇಂದ್ರ ಶೆಟ್ಟಿ ( ಅರಣ್ಯ ಇಲಾಖೆ), ಭೀಮಪ್ಪ ವೈ ಹದ್ದನ್ನವರ್ (ಮೆಸ್ಕಾಂ ಇಲಾಖೆ), ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ (ಶಾಂತಮ್ಮ) ಬೆಳುವಾಯಿಯ ಮುಖ್ಯ ಪಶು ವೈದ್ಯಾಧಿಕಾರಿ ಗುರುರಾಜ್ (ಪಶು ವೈದ್ಯಕೀಯ ಇಲಾಖೆ), ಅಂಗನವಾಡಿ ಕಾಯ೯ಕತೆ೯ ಜಯಂತಿ ( ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ವಾಹನ ಚಾಲಕ ದಾಮೋದರ್ (ಪುರಸಭೆ), ಉಪ ನಿದೇ೯ಶಕಿ ವೀಣಾ ಕೆ.ಆರ್. (ಕೃಷಿ ಇಲಾಖೆ), ಪೆಂಚಾರು ಶಾಲೆಯ ಸಹ ಶಿಕ್ಷಕಿ ಶ್ರೀವಾಣಿ (ಶಿಕ್ಷಣ ಇಲಾಖೆ) ಇವರನ್ನು ಸನ್ಮಾನಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಯೋಜನೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕನಾ೯ಟಕ ಕನ್ನಡ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯ ರಾಜೇಶ್ ಕಡಲಕೆರೆ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ತಾಲೂಕು ಪಂಚಾಯತ್ ಕಾಯ೯ನಿವಾ೯ಹಕಾಧಿಕಾರಿ ಕುಸುಮಾಧರ, ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ., ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ ಉಪಸ್ಥಿತರಿದ್ದರು.
ಜೈನ್ ಪ್ರೌಢಶಾಲೆಯ ವಿದ್ಯಾಥಿ೯ಗಳು ನಾಡಗೀತೆ ಮತ್ತು ರೈತಗೀತೆಯನ್ನು ಹಾಡಿದರು. ಉಪ ತಹಸೀಲ್ದಾರ್ ರಾಮ ಕೆ. ಕಾಯ೯ಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ನಡೆದ ವಿವಿಧ ತಂಡಗಳ ಮೆರವಣಿಗೆ ಯನ್ನು ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು.





