60 ಅಡಿ ಆಳದ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು

60 ಅಡಿ ಆಳದ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು


ಮೂಡುಬಿದಿರೆ: 60 ಅಡಿ ಆಳದ ಬಾವಿಗೆ ಬಿದ್ದ ಹಸುವೊಂದನ್ನು ಮೂಡುಬಿದಿರೆಯ ಅಗ್ನಿಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಮಿಜಾರಿನಲ್ಲಿ ಸೋಮವಾರ ನಡೆದಿದೆ. 


ಬಡಗಮಿಜಾರಿನ ನಿವಾಸಿ ಜಯರಾಮ್ ಗೌಡ ಎಂಬುವವರಿಗೆ ಸೇರಿದ ಸುಮಾರು 60 ಅಡಿ ಆಳ ಹಾಗೂ 5 ಅಡಿ ಅಗಲದ ಬಾವಿಗೆ  ಹಸು ಆಕಸ್ಮಿಕವಾಗಿ ಬಿದ್ದಿತ್ತು. ತಕ್ಷಣ  ಮನೆಯವರು ಹಾಗೂ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.


ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಅತ್ಯಂತ  ಬಾವಿಗಿಳಿದು ಹಸುವಿಗೆ ಯಾವುದೇ ಗಾಯವಾಗದಂತೆ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. 60 ಅಡಿಯಷ್ಟು ಆಳವಿದ್ದರೂ ಸಮಯಪ್ರಜ್ಞೆ ಮೆರೆದ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಅಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿ ದಿವಾಕರ್ ಆಚಾರ್ಯ, ಸಿಬ್ಬಂದಿಗಳಾದ ಪ್ರಸಾದ್, ಪ್ರವೀಣಕುಮಾರ್ ದೊಡ್ಡಮನಿ, ರಾಜೇಂದ್ರ ಸಾತರಕರ, ಮಲ್ಲಿಕಾರ್ಜುನ್ ಅರಬಾವಿ ಹಾಗೂ ಚಾಲಕ ಸಚಿನ್ ರಾಮ್ ನಾಯಕ್ ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article