ಚುಟುಕು ಸಾಹಿತಿ ಹಸು.ಒಡ್ಡಂಬೆಟ್ಟು ಅವರ ‘ಕೋಲ್ಮಿಂಚು’ ಬಿಡುಗಡೆ
Monday, January 26, 2026
ಮಂಗಳೂರು: ಖ್ಯಾತ ಚುಟುಕು ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಸು.ಒಡ್ಡಂಬೆಟ್ಟು ಅವರ ನೇನೋಕತೆಗಳ ಸಂಕಲನ ‘ಕೋಲ್ಮಿಂಚು’ ಜನವರಿ 25 ರಂದು ಕದ್ರಿ ದೇವಾಲಯದ ಅಭಿಷೇಕ ಕಲಾಮಂದಿರದಲ್ಲಿ ನಡೆದ ಸಾಹಿತ್ಯ ವೈಭವ-2026ರ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮವನ್ನು ಕರಾವಳಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಗೌರಾವದ್ಧಕ್ಷ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕಿನ ಅಧ್ಯಕ್ಷ ಗೋಪಾಲಕೃಷ್ಣರಿ ಶಾಸ್ತ್ರೀ, ಕೃತಿಕಾರರಾದ ಹಸು.ಒಡ್ಡಂಬೆಟ್ಟು ಉಪಸ್ಥಿತರಿದ್ದರು.