ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರಾಗಿ ವಿವೇಕ್ ಆಳ್ವ ಆಯ್ಕೆ
Friday, January 16, 2026
ಮೂಡುಬಿದಿರೆ: ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರಾಗಿ ವಿವೇಕ್ ಆಳ್ವ ಅವರು ಆಯ್ಕೆಯಾಗಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ಭಾಸ್ಕರ ದೇವಸ್ಯ, ಶರತ್ ಡಿ. ಶೆಟ್ಟಿ, ನಾಗರಾಜ ಹೆಗಡೆ, ಮನೋಜ್ ಶೆಣೈ, ಸುರೇಶ್ ಕೆ. ಪೂಜಾರಿ ಸೀತಾರಾಮ ಆಚಾರ್ಯ, ಸಂಗೀತಾ ಪ್ರಭು ನೇಮಕಗೊಂಡಿದ್ದಾರೆ.
ಸಂಯೋಜಕರಾಗಿ ಸಮಂಜುನಾಥ ಬೆಳುವಾಯಿ, ಕಾರ್ಯದರ್ಶಿಯಾಗಿ ಆನಂದ ಕೆ. ಶಾಂತಿನಗರ ಹಾಗೂ ಕೋಶಾಧಿಕಾರಿಗಳಾಗಿ ಪ್ರಶಾಂತ್ ಭಂಡಾರಿ, ಗೋಪಾಲಕೃಷ್ಣ ಭಟ್ ಮತ್ತು ನಿತೇಶ್ ಬಲ್ಲಾಳ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮಹಿಳಾ ಸಂಯೋಜಕಿಯಾಗಿ ಉಷಾ ಬೋರ್ಕರ್ ಆಯ್ಕೆಯಾಗಿದ್ದಾರೆ.
ಜೊತೆಗೆ ಸಮಿತಿಯ ಬಲವರ್ಧನೆಗಾಗಿ ಶಿವಾನಂದ ಪ್ರಭು, ರವೀಂದ್ರ ಕರ್ಕೇರ, ನಾಗರಾಜ ಶೆಟ್ಟಿ ಆಂಬೂರಿ, ನವೀನಚಂದ್ರ ಗೌಡ ಬಿ., ಗಂಗಾಧರ ದೇವಾಡಿಗ, ವಿಶ್ವನಾಥ ಬೋವಿ, ನಲಿಕೆ ಕೂಕ್ರ ಸಾಲ್ಯಾನ್ ನವೀನ ಎನ್ ಹೆಗ್ಡೆ, ಗೀತಾ ಆಚಾರ್ಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನಾದ್ಯಂತ ನಡೆಯಲಿರುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗಾಗಿ ಈ ತಂಡವನ್ನು ರಚಿಸಲಾಗಿದೆ.