ರಾಷ್ಟ್ರಮಟ್ಟದ ನೆಟ್ ಬಾಲ್ ಪಂದ್ಯಾಟ: ವಿಜೇತ ಕನಾ೯ಟಕ ತಂಡದ ಕ್ರೀಡಾಪಟುಗಳ ಸಂಭ್ರಮಾಚರಣೆ ನಡೆಸಿದ ಎಡಪದವಿನ ವಿವೇಕಾನಂದ ಕಾಲೇಜು
ಕನಾ೯ಕಟ ತಂಡವನ್ನು ಪ್ರತಿನಿಧಿಸಿರುವ ಸಾಧಕ ಕ್ರೀಡಾಪಟುಗಳಾದ ತಂಡದ ನಾಯಕಿ ಎಡಪದವು ಕಾಲೇಜಿನ ನಿಕಿತಾ, ಹಷಿ೯ತಾ, ಹೇಮಾ, ಸಂಧ್ಯಾ ಮತ್ತು ದಿವ್ಯಾ ಮೂಡುಬಿದಿರೆ ಜೈನ್ ಕಾಲೇಜಿನ ಶ್ರೀರಕ್ಷಾ, ಸಿಂಚನಾ, ಅನ್ವಿತಾ ಹಾಗೂ ಉಜಿರೆ ಎಸ್ ಡಿಎಂನ ಸುಪ್ರಿಯಾ ಮತ್ತು ದೀಪ್ತಿ, ಅವರನ್ನು ಎಡಪದವು ಹನುಮಾನ್ ಮಂದಿರದ ಬಳಿ ಹೂಹಾರ ಹಾಕಿ ತೆರೆದ ಪಿಕಪ್ ವಾಹನದಲ್ಲಿ ಕಾಲೇಜಿನವರೆಗೆ ಪಟಾಕಿ ಸಿಡಿಸಿ, ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಕರೆತರಲಾಯಿತು.
ವಿದ್ಯಾರ್ಥಿಗಳ ಈ ಸಾಧನೆಗೆ ಮಾರ್ಗದರ್ಶನ ನೀಡಿದ ನವೀನ್ ಹೆಗ್ಡೆ (ಜೈನ್ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ),ನವೀನ್ ಕೊರೆಯ (ಇತಿಹಾಸ ಉಪನ್ಯಾಸಕ) ಮಾಧವ ವಿ.ಎಸ್ (ರಾಜ್ಯಶಾಸ್ತ್ರ ಉಪನ್ಯಾಸಕ), ಪ್ರಕಾಶ್ ಅಂತರವಳ್ಳಿ (ಆಂಗ್ಲ ಭಾಷಾ ಉಪನ್ಯಾಸಕ),ಅಪರ್ಣಾ (ತಂಡದ ಮ್ಯಾನೇಜರ್ ಹಾಗೂ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ), ಶಾಂತಾರಾಮ ರೈ (ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ) ಅವರನ್ನು ಗೌರವಿಸಲಾಯಿತು.
ಪ್ರೌಢಶಾಲಾ ಮುಖ್ಯ ಶಿಕ್ಷಕ ವಾಸು ಕೆ. ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲೆ ಗಾಯತ್ರಿ ಸ್ವಾಗತಿಸಿದರು ಮತ್ತು ಶಿಕ್ಷಕ ಕೃಷ್ಣ ಸುಭಾಸ್ ಗುಳಕಣ್ಣವರ್ ವಂದಿಸಿದರು.

