ರಾಜ್ಯ ಮಟ್ಟದ ಉತ್ತಮ ಬಿ.ಎಲ್.ಒ ಪುರಸ್ಕಾರಕ್ಕೆ ಕವಿತಾ ಕೋಟ್ಯಾನ್ ಆಯ್ಕೆ
Wednesday, January 21, 2026
ಮೂಡುಬಿದಿರೆ: ಕ್ಷೇತ್ರದ ತೆಂಕಮಿಜಾರು ಗ್ರಾಮ 4ನೇ ವಾರ್ಡಿನ ಬೂತ್ ಸಂಖ್ಯೆ 202ರ ಬಿ.ಎಲ್.ಒ ಆಗಿ ಸೇವೆ ಸಲ್ಲಿಸುತ್ತಿರುವ ಮಂಗೆಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕವಿತಾ ಕೋಟ್ಯಾನ್ ಅವರು ರಾಜ್ಯ ಮಟ್ಟದ ಉತ್ತಮ ಬಿ.ಎಲ್.ಒ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ಕಡಿತ (ಡಿಲೀಟ್), ತಿದ್ದುಪಡಿ ಹಾಗೂ ನಿರಂತರ ಪರಿಷ್ಕರಣೆ ಕಾರ್ಯಗಳನ್ನು ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ನಿರ್ವಹಿಸಿದ ಹಿನ್ನೆಲೆಯಲ್ಲಿ ಇವರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಏಕೈಕ ಬಿ.ಎಲ್.ಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕವಿತಾ ಕೋಟ್ಯಾನ್ ರವರ ಸಾಧನೆಗೆ ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಕೆ.ಸಾಲ್ಯಾನ್, ಪಿಡಿಒ ರೋಹಿಣಿ ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.