ಪಂಚಶಕ್ತಿ‌ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಕಛೇರಿ "ಫಾಚೂ೯ನ್ ನೀತಿ"ಯಲ್ಲಿ ಉದ್ಘಾಟನೆ

ಪಂಚಶಕ್ತಿ‌ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಕಛೇರಿ "ಫಾಚೂ೯ನ್ ನೀತಿ"ಯಲ್ಲಿ ಉದ್ಘಾಟನೆ


ಮೂಡುಬಿದಿರೆ: ಇಲ್ಲಿನ ಬಸ್ಸು ನಿಲ್ದಾಣದ ಬಳಿಯ ಬಾಡಿಗೆ ಕಟ್ಟಡದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ  ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಪಂಚಶಕ್ತಿ‌ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಗುರುವಾರ ಪುರಸಭಾ ಕಚೇರಿ ಎದುರಿನ ಫಾರ್ಚೂನ್ ನೀತಿ ಕಟ್ಟಡಕ್ಕೆ  ಸ್ಥಳಾಂತರಗೊಂಡಿದ್ದು ನೂತನ ಕಚೇರಿಯನ್ನು  ಶಾಸಕ ಉಮಾನಾಥ ಕೋಟ್ಯಾನ್  ಉದ್ಘಾಟಿಸಿದರು. 


ನಂತರ ಮಾತನಾಡಿದ ಅವರು ಕಳೆದ 12 ವಷ೯ಗಳಿಂದ ಬಾಡಿಗೆ ಕಟ್ಟಡದಲ್ಲಿದ್ದು ಜನರಿಗೆ ಉತ್ತಮ ಸೇವೆಯನ್ನು ಬಂದಿರುವುದರಿಂದ ಲಾಭಾಂಶವನ್ನು ಗಳಿಸಿ ಗ್ರಾಹಕರಿಗೆ 12% ಡಿವಿಡೆಂಟನ್ನು ನೀಡಲು ಸಾಧ್ಯವಾಗಿದೆ. ಇದೀಗ ಸ್ವಂತ ಕಟ್ಟಡದಲ್ಲಿ ಆರಂಭಗೊಂಡಿದ್ದು ಮುಂದೆ ಹಲವಾರು ಬ್ರಾಂಚ್ ಗಳು ತೆರೆಯುವಂತ್ತಾಗಲಿ ಮತ್ತು ಆಥಿ೯ಕ ವ್ಯವಹಾರಗಳು ಹೆಚ್ಚಾಗಲಿ ಎಂದು ಶುಭ ಹಾರೈಸಿದರು.


ಸಂಘದ ಅಧ್ಯಕ್ಷ ರಂಜಿತ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾಯ೯ವಯ೯  ಸ್ವಾಮೀಜಿ ಆಶೀವ೯ಚನ ನೀಡಿದರು. 


ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಬ್ಯಾಂಕಿನಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿ ಎಂದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಚೌಟರ ಅರಮನೆಯ ಕುಲದೀಪ್ ಎಂ, ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಡಾ. ಅಮರಶ್ರೀ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್,ಮೇಘನಾಥ ಶೆಟ್ಟಿ,ಅಬುಲ್ ಅಲಾ ಪುತ್ತಿಗೆ, ಅಶ್ವಿನ್ ಜೆ‌.ಪಿರೇರಾ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಉಪಾಧ್ಯಕ್ಷೆ ಉಷಾ ಭಂಡಾರಿ, ನಿರ್ದೇಶಕರಾದ ಸುರೇಶ್ ಕೆ. ಪೂಜಾರಿ, ರವೀಂದ್ರ ಕರ್ಕೇರ,  ರತ್ನಾಕರ ಪೂಜಾರಿ,ರಾಜೇಂದ್ರ ಬಿ, ಶರತ್ ಶೆಟ್ಟಿ,  ನಾಗೇಶ್ ನಾಯ್ಕ,ಮೀನಾಕ್ಷಿ ಅಂಚನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ ಮಧ್ಯಸ್ಥ, ಗೋಪಾಲ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಮೇಶ್ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article