ಕೋಟೆಬಾಗಿಲು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಅಬ್ದುಲ್ ಗಫೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ
Thursday, January 29, 2026
ಮೂಡುಬಿದಿರೆ: ಕೋಟೆಬಾಗಿಲಿನ ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸ ಕಮಿಟಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಗಫೂರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ ಅವರು ಆಯ್ಕೆಯಾಗಿದ್ದಾರೆ.
ಮಸೀದಿಯ ಗೌರವಾಧ್ಯಕ್ಷರಾದ ಉಸ್ತಾದ್ ಇರ್ಷಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಸಲೀಮ್ ಮೇಸ್ತ್ರಿ, ಕೋಶಾಧಿಕಾರಿಯಾಗಿ ಹೈದರ್ ಕೋಟೆಬಾಗಿಲು, ಜತೆ ಕಾರ್ಯದರ್ಶಿಯಾಗಿ ರಝಾಕ್ ಮದನಿ, ಸದಸ್ಯರಾಗಿ ಹಸನಬ್ಬ, ಇಕ್ಬಾಲ್, ಅಬ್ಬಾಸ್, ಅಶ್ರಫ್, ಜಮಾಲ್ ಹಾಗೂ ಅಝೀಝ್ ಮದನಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ ಅವರು ಸ್ವಾಗತಿಸಿ, 2024-26ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು.
ಮಸೀದಿಯ ಖತೀಬರಾದ ಸಲೀಂ ಹನೀಫಿ, ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ಸಿರಾಜ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.