ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್: ಜಿಲ್ಲೆಯ ಐವರು ವಿದ್ಯಾರ್ಥಿಗಳಿಗೆ ಪದಕ
Saturday, January 10, 2026
ಮೂಡುಬಿದಿರೆ: ಭಾರತೀಯ ಸ್ಕ್ವೇಯ್ ಸಂಸ್ಥೆಯು ತೆಲಂಗಾಣ ರಾಜ್ಯದ ಹೈದರಾಬಾದ್ ನ ಬಾಲಯೋಗಿ ಗಚಿ ಬೌಲಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಿದ್ದ 26 ನೇ ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಜಿಲ್ಲೆಯ 11 ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿ ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕವನ್ನು ಪಡೆದು ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮುಹಮ್ಮದ್ ನಹ್ಯಾನ್ ಅಬೂಬಕ್ಕರ್ 11 ವರ್ಷ ವಯೋಮಿತಿಯ 27 ಕೆಜಿ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದು ಅಕ್ಟೋಬರ್ ನಲ್ಲಿ ಕಿರ್ಗಿಸ್ತಾನ್ ನಲ್ಲಿ ನಡೆಯಲಿರುವ ಏಷ್ಯನ್ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಗೆ ಆಯ್ಕೆಯಾದರೆ ನಿಗಮ್ ಜೈನ್ 18 ವರ್ಷ ಕೆಳಗಿನ ವಯೋಮಿತಿಯ 52 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ಯತೀಂದ್ರ ಎ. 56 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ಸುಲೈಮಾನ್ ಮುಹಮ್ಮದ್ ಶಾಹಿಲ್ 18 ವರ್ಷ ಮೇಲ್ಪಟ್ಟ 50 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಹುಡುಗಿಯರ ವಿಭಾಗದಲ್ಲಿ ಆಯಿಷತುಲ್ ನಾಫಿಯಾ 30 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಇವರೆಲ್ಲರೂ ಜಿಲ್ಲಾ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಮುಹಮ್ಮದ್ ನದೀಮ್, ಸರ್ಫ್ರಾಝ್ ಅಬ್ದುಲ್ ಖಾದ್ರಿ, ಅಬ್ದುಲ್ ರಹಮಾನ್ ಹಾಗೂ ರಾಜೇಶ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ