ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಸ್ಪರ್ಧೆ: ಮೂಡುಬಿದಿರೆಯ ನಹ್ಯಾನ್ ಗೆ ಬೆಳ್ಳಿ ಪದಕ
Saturday, January 10, 2026
ಮೂಡುಬಿದಿರೆ: ಭಾರತೀಯ ಸ್ಕ್ವೇಯ್ ಸಂಸ್ಥೆಯು ತೆಲಂಗಾಣ ರಾಜ್ಯದ ಹೈದರಾಬಾದ್ ನ ಬಾಲಯೋಗಿ ಗಚಿ ಬೌಲಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಮುಹಮ್ಮದ್ ನಹ್ಯಾನ್ ಅಬೂಬಕ್ಕರ್ ಅವರು ಹನ್ನೊಂದರ ಹರೆಯದ ವಯೋಮಿತಿಯ 27 ಕೆಜಿ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿ ಬೆಳ್ಳಿಯ ಪದಕವನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀತಿ೯ ತಂದಿದ್ದಾರೆ.
ಜಿಲ್ಲಾ ಸ್ಕ್ವೇಯ್ ಸಂಸ್ಥೆಯ ಮುಹಮ್ಮದ್ ನದೀಮ್ ಅವರಿಂದ ತರಬೇತಿಯನ್ನು ಪಡೆಯುತ್ತಿರುವ ನಹ್ಯಾನ್ ಅಕ್ಟೋಬರ್ ತಿಂಗಳಲ್ಲಿ ಕಿರ್ಗಿಸ್ಥಾನ್ ನಲ್ಲಿ ನಡೆಯುವ ಏಶಿಯನ್ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ಅಲ್ ಬಿರ್ರ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿರುವ ನಹ್ಯಾನ್ ಶೊರಿನ್ ರಿಯೂ ಕರಾಟೆ ಅಸೋಸಿಯೇಷನ್ ಮುಖ್ಯಸ್ಥ ಮುಹಮ್ಮದ್ ನದೀಮ್-ಝಕೀಯ ಯಾಸ್ಮಿನ್ ಅವರ ಪುತ್ರ.