ರಾಜ್ಯಮಟ್ಟದ ಕನ್ನಡ ಗೀತೆ ಮತ್ತು ಜಾನಪದ ಗೀತೆಗಳ ನೃತ್ಯ ಸ್ಪರ್ಧೆಯಲ್ಲಿ ಜಿಲ್ಲಾ ತಂಡದ ಗಮನಾರ್ಹ ಸಾಧನೆ
ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಅನಿತಾ ಶೆಟ್ಟಿ ಮೂಡುಬಿದಿರೆ ಅವರ ನೇತೃತ್ವದ ‘ಕಲಾವೈಭವ’ ತಂಡವು ರಾಜ್ಯದಾದ್ಯಂತ ಭಾಗವಹಿಸಿದ್ದ 79 ತಂಡಗಳ ನಡುವಿನ ತೀವ್ರ ಪೈಪೋಟಿಯಲ್ಲಿ ಸಮಾಧಾನಕರ ಬಹುಮಾನದೊಂದಿಗೆ 20,000 ರೂಪಾಯಿ ನಗದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಅನಿತಾ ಶೆಟ್ಟಿ: ಕೆಪಿಎಸ್ ಮಿಜಾರು (ಪ್ರೌಢಶಾಲೆ), ಮೂಡುಬಿದಿರೆಣ ಇಂದಿರಾ ಎಸ್.: ಕಾಟಿಪಳ್ಳ ೩ನೇ ವಿಭಾಗ, ಮಂಗಳೂರು ಉತ್ತರ, ಸುಚಿತ್ರಾ: ಸ.ಮಾ.ಹಿ. ಪ್ರಾಥಮಿಕ ಶಾಲೆ ಸುರತ್ಕಲ್, ಮಂಗಳೂರು ಉತ್ತರಣ ನಯನಗೌರಿ: ಕೆಪಿಎಸ್ ಕನ್ಯಾನ, ಬಂಟ್ವಾಳ, ಪ್ರದೀಪ್ ಕುಮಾರ್: ಪಿ.ಎಂ ಶ್ರೀ ಕುವೆಂಪು ಶತಮಾನೋತ್ಸವ ಶಾಲೆ ನಾಲ್ಯಪದವು, ಮಂಗಳೂರು ದಕ್ಷಿಣ, ನಾಗರತ್ನ ಶಿರೂರು: ಕೆಪಿಎಸ್ ಮಿಜಾರು, ಮೂಡುಬಿದಿರೆ, ಗೀತಾ: ಕೆಪಿಎಸ್ ಮಿಜಾರು, ಮೂಡುಬಿದಿರೆ, ಯೋಗಿತಾ: ಸ.ಹಿ.ಪ್ರಾ. ಶಾಲೆ ನೀರ್ಕೆರೆ, ಮೂಡುಬಿದಿರೆ, ಪ್ರಶಾಂತ್ ಎನ್.: ಸ.ಹಿ.ಪ್ರಾ. ಶಾಲೆ ಅಳಿಯೂರು, ಮೂಡುಬಿದಿರೆ, ರಾಜೇಶ್: ಸ.ಕಿ.ಪ್ರಾ. ಶಾಲೆ ಕೊಳಲ ಬಾಕಿಮಾರು, ಬಂಟ್ವಾಳ, ರಮ್ಯಾ: ಪಿ.ಎಂ ಶ್ರೀ ಶಾಲೆ ಸದಾಶಿವ ನಗರ, ಮಂಗಳೂರು ಉತ್ತರ, ಸೌಮ್ಯ ನಾಯಕ್: ಸರಕಾರಿ ಪ್ರೌಢಶಾಲೆ ಕಾಟಿಪಳ್ಳ ೫ನೇ ವಿಭಾಗ, ಮಂಗಳೂರು ಉತ್ತರ-ತಂಡದಲ್ಲಿದ್ದು ಅತ್ಯುತ್ತಮ ಪ್ರದರ್ಶನ ನೀಡಿದರು.