ಪ್ರತಿಭಾ ಪಿ. ಶೆಣೈಗೆ 'ರಾಣಿ ಅಬ್ಬಕ್ಕ ಪ್ರೇರಣಾ ಗೌರವ'
ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಯೋಜಕಿಯಾಗಿ ತೀರ್ಪುಗಾರರಾಗಿ ಭಾಗವಹಿಸಿರುವ ಇವರು ಸುಮಾರು 700 ಕ್ಕಿಂತ ಹೆಚ್ಚು ಬೆಕ್ಕು ನಾಯಿ ಗಳಂತಹ ಪ್ರಾಣಿಗಳು ಅಪಘಾತವಾದಾಗ ಅವುಗಳಿಗೆ ಸರಕಾರಿ ಮತ್ತು ಖಾಸಗಿ ವೈದ್ಯರ ಮೂಲಕ ಸೂಕ್ತ ಚಿಕಿತ್ಸೆಯನ್ನು ಕೊಡಿಸಿ ಅವುಗಳನ್ನು ಮತ್ತೆ ಸುಸ್ತಾನಕ್ಕೆ ಬಿಡುವುದಲ್ಲದೆ ನಾಯಿಗಳಿಂದ ದಾಳಿಗೊಳಗಾದ ಮಂಗ, ಉಡ, ಪರ್ಶಿಯನ್ ಬೆಕ್ಕು ಮುಂತಾದ ಪ್ರಾಣಿಗಳನ್ನು ರಕ್ಷಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಕ್ತ ಕ್ರಮಕ್ಕಾಗಿ ಹಸ್ತಾಂತರಿಸಿದ್ದು ವಾಹನ ಅಪಘಾತದಿಂದ ಸಾವಿಗೀಡಾದ ನವಿಲನ್ನು ಅರಣ್ಯ ಇಲಾಖೆಯ ಸಹಕಾರದಿಂದ ಸೂಕ್ತ ರೀತಿಯಲ್ಲಿ ದಫನ ಕ್ರಿಯೆಗೆ ಒಳಪಡಿಸಿದ್ದಲ್ಲದೆ. ನೂರಾರು ಅನಾಥ ಪ್ರಾಣಿಗಳನ್ನು ರಕ್ಷಿಸುವಲ್ಲಿ ಅವುಗಳ ಮೇಲಿನ ಇವರ ಮಾನವೀಯತೆಯನ್ನು ಗುರುತಿಸಿ, ಇವರ ನಿಸ್ವಾರ್ಥ ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಾಣಿಗಳ ಸೇವೆ ಮಾತ್ರವಲ್ಲದೆ ಸಮಾಜಸೇವೆ ವಿಶೇಷ ಚೇತನ ಮಕ್ಕಳ ಬಗ್ಗೆಯೂ ಕಳಕಳಿಯುಳ್ಳವರಾಗಿದ್ದು ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅನೇಕೆ ಕಡೆಗಳಲ್ಲಿ ನಡೆದ ಪ್ಯಾಶನ್ ಶೋನಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುತ್ತಾರೆ. ಇವರ ಈ ಎಲ್ಲಾ ಸೇವೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.