ಹಿಂದುತ್ವ ಎಂದರೆ ಭಾರತೀಯತೆ: ಗುರುಪ್ರಸಾದ್ ಉಳ್ಳಾಲ್
ಅವರು ಭಾನುವಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಕಡಂದಲೆ, ಪಾಲಡ್ಕ, ಪುತ್ತಿಗೆ ಗ್ರಾಮಗಳನ್ನು ಒಳಗೊಂಡ ಪುತ್ತಿಗೆ ಮಂಡಲ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಪ್ಲಾಸ್ಟಿಕ್ ಮುಕ್ತ ಮಂಡಲ, ಮತಾಂತರ ಮುಕ್ತ ಮಂಡಲ, ಲವ್ ಜಿಹಾದ್ ಮುಕ್ತ ಮಂಡಲ ಎಂಬ ಚಿಂತನೆಯೊಂದಿಗೆ ಸಮಾಜ ಪರಿವರ್ತನೆಯತ್ತ ಸಾಗಬೇಕಾಗಿದೆ.
ದೇಶದ ಆತ್ಮವೇ ಹಿಂದುತ್ವ. ಆದರೆ ಇದರ ಅರ್ಥವನ್ನು ಬದಲಾಯಿಸುವ ಹುನ್ನಾರು ಅನೇಕ ವರ್ಷಗಳಿಂದ ನಡೆಯುತ್ತಿವೆ ಎಂದ ಅವರು ಸಮಾಜದೊಳಗೆ ನಡೆಯುತ್ತಿರುವ ಹುನ್ನಾರಗಳಿಗೆ ಸಮರ್ಥವಾಗಿ ಉತ್ತರ ನೀಡುವ ಸದೃಢ ಹಿಂದೂ ಸಮಾಜ ನಿರ್ಮಾಣದ ಉದ್ದೇಶದಿಂದ ಹಿಂದೂ ಸಂಗಮ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ್ ಎಂ. ವಹಿಸಿದ್ದರು. ದೇವಳದ ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಕಡಂದಲೆ ಸತೀಶ್ ಆಚಾರ್ಯ, ರಂಗನಾಥ ಭಟ್ ದೇಂತಬೆಟ್ಟು ಪುತ್ತಿಗೆ ಹಾಗೂ ಕುಟ್ಟಿ ಬಂಗೇರ ಸಂಪಿಗೆ ಅವರನ್ನು ಸನ್ಮಾನಿಸಲಾಯಿತು.
ಹಿಂದೂ ಸಂಗಮದ ಸಂಯೋಜಕ ಶೇಖರ್ ಕೋಟ್ಯಾನ್ ಪುತ್ತಿಗೆ ಉಪಸ್ಥಿತರಿದ್ದರು.
ಪ್ರಶಾಂತ್ ಭಂಡಾರಿ ಸ್ವಾಗತಿಸಿದರು. ಸಂದೀಪ್ ಶೆಟ್ಟಿ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ನೆಲ್ಲಿಗುಡ್ಡೆಯಿಂದ ಪುತ್ತಿಗೆ ದೇವಸ್ಥಾನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಶೋಭಾಯಾತ್ರೆ ನಡೆಯಿತು.