ಕಲ್ಲಬೆಟ್ಟು ಶಾಲೆಯಲ್ಲಿ ಹುತಾತ್ಮರ ದಿನ ಆಚರಣೆ: ವಿದ್ಯಾಥಿ೯ಗಳಿಂದ ಸ್ವಚ್ಛತಾ ಕಾಯ೯ಕ್ರಮ
Friday, January 30, 2026
ಮೂಡುಬಿದಿರೆ: ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟು ಇಲ್ಲಿ ಶುಕ್ರವಾರದಂದು ಹುತಾತ್ಮರ ದಿನವನ್ನು ಆಚರಿಸಲಾಯಿತು.
ನಮ್ಮ ದೇಶಕ್ಕಾಗಿ ತಮ್ಮ ಜೀವವನ್ನು ಅರ್ಪಿಸಿದ ಮಹಾತ್ಮರನ್ನು ಸ್ಮರಿಸಿ ಎರಡು ನಿಮಿಷಗಳ ಕಾಲ ಮೌನಚರಣೆಯನ್ನು ಮಾಡಲಾಯಿತು. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಿದರು.
ನಂತರ ಭಗತ್ ಸಿಂಗ್ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನು ವಿದ್ಯಾಥಿ೯ಗಳಿಗೆ ತೋರಿಸಿ ಅವರ ಜೀವನ ಚರಿತ್ರೆಯನ್ನು ತಿಳಿಸಲಾಯಿತು.
ಎಲ್ಲಾ ವಿದ್ಯಾರ್ಥಿಗಳು ದೇಶ ಗೌರವ ಕಾಪಾಡುತ್ತೇವೆ. ನಿಷ್ಠೆಯಿಂದ ನಡೆದುಕೊಳ್ಳುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡಿದರು.
ನಂತರ ಎಲ್ಲಾ ವಿದ್ಯಾರ್ಥಿಗಳು ಶಾಲಾ ವಠಾರ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿ ಸ್ವಚ್ಛತಾ ಅಭಿಯಾನವನ್ನು ನಡೆಸಿದರು.