ಎಂಸಿಎಸ್ ಬ್ಯಾಂಕ್ ಗೆ ಉಡುಪಿ ಶೀರೂರು ಮಠದ ಶ್ರೀ ವೇದವಧ೯ನ ತೀಥ೯ ಸ್ವಾಮೀಜಿ ಭೇಟಿ
Wednesday, January 7, 2026
ಕೃಷ್ಣನ ಸೇವೆ ಮಾಡುವ ಮೂಲಕ ದೊಡ್ಡವರಾಗಿ: ವೇದವಧ೯ನ ತೀಥ೯
ಮೂಡುಬಿದಿರೆ: ಶೀರೂರು ಪಯಾ೯ಯದ ಅಂಗವಾಗಿ ಉಡುಪಿ ಶೀರೂರು ಮಠದ ಜಗದ್ಗುರು ಶ್ರೀ ಮಧ್ವಾಚಾಯ೯ ಮೂಲ ಸಂಸ್ಥಾನದ ಶ್ರೀ ಶ್ರೀ ವೇದವಧ೯ನ ತೀಥ೯ ಸ್ವಾಮೀಜಿ ಅವರು ಮೂಡುಬಿದಿರೆ ಕೋ ಅಪರೇಟಿವ್ ಸವೀ೯ಸ್ ಸೊಸೈಟಿಗೆ ಬುಧವಾರ ಭೇಟಿ ನೀಡಿದರು.
ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ವಿಶೇಷ ಕಾಯ೯ನಿವ೯ಹಣಾಧಿಕಾರಿ ಚಂದ್ರಶೇಖರ ಎಂ., ಸ್ವಾಮೀಜಿ ಅವರನ್ನು ಬರಮಾಡಿಕೊಂಡರು.
ನಂತರ ಆಶೀವ೯ಚನ ನೀಡಿದ ವೇದವಧ೯ನ ಸ್ವಾಮೀಜಿ ಅವರು ಪಯಾ೯ಯ ಎಂದರೆ ಪೂಜೆ ಮಾಡುವ ಅವಕಾಶ. ಶೀರೂರು ಪಯಾ೯ಯ ಅದು ನಿಮ್ಮೆಲ್ಲರ ಪಯಾ೯ಯವೆಂದು ಅರಿತು ಭಕ್ತರೆಲ್ಲರೂ ಪ್ರತಿದಿನ ಪಾಲ್ಗೊಂಡು ಕೃಷ್ಣನ ಸೇವೆ ಮಾಡುವಂತ್ತಾಗಬೇಕು. ಕೃಷ್ಣನ ಸೇವೆ ಬರೆಸಿಕೊಂಡವರೆಲ್ಲರೂ ಯಜಮಾನರೇ ಆದ್ದರಿಂದ ಆತನ ಸೇವೆಯನ್ನು ಮಾಡುವ ಮೂಲಕ ಎಲ್ಲರೂ ದೊಡ್ಡವರಾಗಿ ಎಂದು ಹಾರೈ ಸಿದರು.
ಸೊಸೈಟಿಯ ನಿರ್ದೇಶಕ ಅಭಯ್ ಚಂದ್ರ ಜೈನ್, ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ ಉದ್ಯಮಿ ಕೆ. ಶ್ರೀಪತಿ ಭಟ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದಶ೯ನ್ ಎಂ.ಸೊಸೈಟಿಯ ಉಪಾಧ್ಯಕ್ಷ ಗಣೇಶ್ ನಾಯಕ್, ಕಾಯ೯ದಶಿ೯ ರಘುವೀರ್ ಕಾಮತ್ ಮತ್ತಿತರರು ಈ ಸಂದಭ೯ದಲ್ಲಿದ್ದರು.

