ಕಲಾವಿದ ಉಮೇಶ್ ಮಿಜಾರ್ ಗೆ ಕುಂದೇಶ್ವರ ಕಲಾಭೂಷಣ್ ಪ್ರಶಸ್ತಿ

ಕಲಾವಿದ ಉಮೇಶ್ ಮಿಜಾರ್ ಗೆ ಕುಂದೇಶ್ವರ ಕಲಾಭೂಷಣ್ ಪ್ರಶಸ್ತಿ


ಮೂಡುಬಿದಿರೆ: ಕಾಕ೯ಳ ಹಿಗಾ೯ನದ ಕುಂದೇಶ್ವರ ಕ್ಷೇತ್ರದ ವತಿಯಿಂದ ಕಲಾವಿದರಿಗೆ ನೀಡಲಾಗುವ ಕುಂದೇಶ್ವರ ಕಲಾಭೂಷಣ್ ಪ್ರಶಸ್ತಿಗೆ ರಂಗಭೂಮಿ ಕಲಾವಿದ ಉಮೇಶ್ ಮಿಜಾರ್ ಆಯ್ಕೆಯಾಗಿದ್ದಾರೆ. 

ಹೊಟೇಲ್ ಕಾಮಿ೯ಕರಾಗಿ ದುಡಿಯುತ್ತಲೇ ರಂಗಭೂಮಿಯತ್ತ ಆಕಷಿ೯ತರಾದ ಉಮೇಶ್ ಮಿಜಾರು ಮುಂಬೈಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು.ಬಳಿಕ ನಾಟಕ ರಚನೆ, ಹಾಗೂ ಹಾಸ್ಯ ನಟನೆಯಲ್ಲಿ ಅಭಿನಯಿಸಿದ್ದಾರೆ.

ಮಿಜಾರಿನ ಯಕ್ಷಗಾನ ಕಲಾವಿದ ದಂಪತಿ ಪುತ್ರರಾದ 35 ವಷ೯ಗಳ ಕಲಾ ಬದುಕಿನಲ್ಲಿ 80 ತುಳು ಸಿನೆಮಾ, ಆರು ಕನ್ನಡ ಸಿನೆಮಾ, ಆರು ದಾರಾವಾಹಿಗಳಲ್ಲಿ ನಟಿಸಿದ್ದಾರೆ. "ನಮ್ಮ ಕಲಾವಿದೆರ್ ಬೊಳ್ಳಿ"ತಂಡವನ್ನು ಕಟ್ಟಿಕೊಂಡು ಅನೇಕ ತುಳು ನಾಟಕಗಳನ್ನು ರಚಿಸಿ, ನಿದೇ೯ಶಿಸಿ, ಅಭಿನಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article